ಮಂಡ್ಯ: ನಾಟಕದಲ್ಲಿ ದೇವಿ ಪಾತ್ರಧಾರಿ ಮಹಿಳೆಯೊಬ್ಬರು ಇನ್ನೊಬ್ಬ ಪುರುಷ ಪಾತ್ರಧಾರಿಗೆ ಇನ್ನೇನು ಚುಚ್ಚೇ ಬಿಟ್ಟರು ಎನ್ನುವಷ್ಟರಲ್ಲಿ ಸಹಕಲಾವಿದರು ಬಂದು ಕರೆದೊಯ್ದಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಈ ಘಟನೆ ಮಂಡ್ಯದಲ್ಲಿ ಫೆಬ್ರುವರಿ 6 ರಂದು ನಡೆದಿದೆ. ಕೈಯಲ್ಲಿ ತ್ರಿಶೂಲ ಹಿಡಿದಿದ್ದ ಚಾಮುಂಡೇಶ್ವರಿ ದೇವಿ ಪಾತ್ರಧಾರಿಯೊಬ್ಬರು ರಾಕ್ಷಸ ಸಂಹಾರ ಮಾಡುವ ಸನ್ನಿವೇಶ ಇತ್ತು. ಈ ವೇಳೆ ಪಾತ್ರಧಾರಿಯ ದೇಹದಲ್ಲಿ ಚಾಮುಂಡಿ ದೇವಿಯೇ ಆವಾಹನೆ ಆಗಿ ರಾಕ್ಷಸನನ್ನು ಕೊಲ್ಲಲು ಮುಂದಾಗಿದೆ ಎನ್ನಲಾಗಿದೆ.
ಪ್ರತಿ ಬಾರಿಯೂ ಹೀಗೆ ಆಗುತ್ತದೆಂಬ ನಂಬಿಕೆ ಇದೆ. ಕೌಂಡಲಿಕ ವಧೆ ಮಾಡುವಾಗ ದೇವಿ ಪಾತ್ರಧಾರಿಯ ದೇಹದಲ್ಲಿ ಸಾಕ್ಷಾತ್ ದೇವಿಯೇ ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಇದೆ.
PublicNext
24/02/2021 03:12 pm