ಸಂಗೀತ ಅನ್ನೋದಿದೆಯಲ್ಲ. ಅದರ ಪವರ್ರೇ ಬೇರೆ. ಈ ಮ್ಯೂಸಿಕ್ ಎಲ್ಲ ಟೈಮ್ ಪಾಸ್ ಎಂದು ವಾದಿಸುವವರನ್ನೂ ಅದು ತನ್ನತ್ತ ಸೆಳೆದುಕೊಳ್ಳುತ್ತೆ. ಅಂತಾದ್ರಲ್ಲಿ ಸಂಗೀತದ ಮೇಲೆ ಆಸಕ್ತಿ, ಒಲವು ಇರುವವರನ್ನ ಅದು ಸುಮ್ನೆ ಬಿಡ್ತದಾ..ನೋ ವೇ ಚಾನ್ಸೇ ಇಲ್ಲ.
ಈ ಗುಂಡು ಮುಖದ ಬಾಲಕನನ್ನೇ ನೋಡಿ. ಖವ್ವಾಲಿ ಹಾಡಿಗೆ ಕೂತಲ್ಲೇ ಮೈ ಮರೆತಿದ್ದಾನೆ. ಅದರ ನಾದದ ಏರಿಳಿತ, ಸಹವಾದ್ಯಗಳ ಸುಮಧುರ ಸದ್ದಿನ ಲಯ, ಇದೆಲ್ಲದರಲ್ಲಿ ಗಾಯಕರು ಎಷ್ಟು ತಲ್ಲೀನರಾಗಿದ್ದರೋ ಗೊತ್ತಿಲ್ಲ. ಆದರೆ ಅದನ್ನೆಲ್ಲ ಆರಾಧಿಸುತ್ತಿದ್ದ ಈ ಬಾಲಕನಲ್ಲಿ ಮಾತ್ರ ಪರಕಾಯ ಪ್ರವೇಶವಾಗಿದೆ. ಗಾಯನದ ಗಮ್ಮತ್ತಿಗೆ ಕಣ್ಮುಚ್ಚಿ, ತುಟಿ ಕಚ್ಚಿ, ಚಪ್ಪಾಳೆ ತಟ್ಟಿ, ಮೈಮರೆತು ಸಂಗೀತವನ್ನ ಅಸ್ವಾದಿಸಿದ್ದಾನೆ. ಅಂದ್ ಹಾಗೆ ಹಿಂದೆ ಕೂತಿದ್ದ ಬಾಲಕಿಯರು ಈತನ ಚಿತ್ತಭಂಗ ಮಾಡುವ ಮೂಲಕ ಕಿಚಾಯಿಸಿದ್ದಾರೆ. ಕೂಡಲೇ ಅವರತ್ತ ನೋಡಿ ಗುರಾಯಿಸಿದ ಈ ಬಾಲಕ ಮತ್ತೆ ತನ್ನ ಭಾವ ತನ್ಮಯತೆಯನ್ನು ಮುಂದುವರೆಸಿದ್ದಾನೆ. ಸದ್ಯ ಈ ವಿಡಿಯೋವನ್ನ ಎಲ್ಲರೂ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡ್ತಿದ್ದಾರೆ.
PublicNext
23/02/2021 04:07 pm