ಚಾಮರಾಜನಗರ: ಪ್ರೇಮಿಗಳ ದಿನದ ಪ್ರಯುಕ್ತ ಐದು ದಿನಗಳ ಕಾಲ ರಜೆ ಕೊಡಬೇಕು ಎಂದು ಕೊಳ್ಳೇಗಾಲದ ವಿದ್ಯಾರ್ಥಿಯೊಬ್ಬ ಮನವಿ ಮಾಡಿ ಪ್ರಾಂಶುಪಾಲರಿಗೆ ಬರೆದಿದ್ದಾನೆ ಎನ್ನಲಾದ ರಜಾ ಪತ್ರವೊಂದು ವಾಟ್ಸ್‌ಆ್ಯಪ್‌ನಲ್ಲಿ ವೈರಲ್ ಆಗಿದೆ.
ಕೊಳ್ಳೆಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂನಲ್ಲಿ ಓದುತ್ತಿರುವ ಶಿವರಾಜು ಎಸ್ ಎಂಬ ವಿದ್ಯಾರ್ಥಿಯ ಹೆಸರಿನಲ್ಲಿ ಇದೇ 9ರಂದು ರಜೆಯ ಅರ್ಜಿ ಬರೆಯಲಾಗಿದೆ. ಪ್ರಾಂಶುಪಾಲರನ್ನು ಉದ್ದೇಶಿಸಿ ಬರೆಯಲಾದ ರಜಾ ಅರ್ಜಿ ಇದಾಗಿದ್ದು, ಅದರಲ್ಲಿ ಪ್ರಾಂಶುಪಾಲರ ಮೊಹರು ಹಾಗೂ ಹಸಿರು ಶಾಯಿಯಲ್ಲಿ ಮಾಡಿರುವ ಸಹಿಯೂ ಇದೆ.
ಈ ರಜಾ ಅರ್ಜಿಯ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಸೀಗನಾಯಕ ಅವರು ಸ್ಪಷ್ಟಪಡಿಸಿದ್ದಾರೆ.
PublicNext
10/02/2021 10:46 pm