ಯುಕಾನ್: ಮೈನಸ್ 20 ಡಿಗ್ರಿಯಲ್ಲಿ ಭಾಂಗ್ರಾ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು ನೋಡುಗರ ಮೈ ಜುಮ್ ಎನ್ನುವಂತಿದೆ.
ಹೌದು ಡ್ಯಾನ್ಸ್ ಮಾಸ್ಟರ್ ಗುರ್ದೀಪ್ ಪಾಂಧೆರ್ ಹಾಗೂ ತಂಡ ಮೈನಸ್ 20 ಡಿಗ್ರಿಯಲ್ಲಿ 'ಭಾಂಗ್ರಾ' ನೃತ್ಯ ಮಾಡುವ ಮೂಲಕ ಪ್ರಪಂಚದಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿದ್ದಾರೆ. ಕೆನಡಾದ ಹಿಮದಿಂದ ಆವೃತವಾದ ಯುಕಾನ್ ನಲ್ಲಿ ಗುರ್ದೀಪ್ ಪಾಂಧೆರ್ ಹಾಗೂ ತಂಡದ ಭಂಗ್ರಾ ನೃತ್ಯ ಈಗ ಟ್ವಿಟರ್ ನಲ್ಲಿ ಸದ್ದು ಮಾಡುತ್ತಿದೆ.
ತಮ್ಮ ನೃತ್ಯ ತರಗತಿಯ ವೀಡಿಯೊವನ್ನು ಶೇರ್ ಮಾಡಿರುವ ಪಾಂಧೆರ್ ಅವರು, "ಯುಕಾನ್ ನಲ್ಲಿ ಹೊರಾಂಗಣ ಚಳಿಗಾಲದ ಭಂಗ್ರಾ ಕ್ಲಾಸ್ ಇದು. ಅದು ಮೈನಸ್ 20 ಡಿಗ್ರಿ ಸೆಲ್ಸಿಯಸ್ ಇದ್ದಾಗ ಹಿಮದ ಮೇಲೆ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡಿದ ನೃತ್ಯ ಮಾಡಲಾಗಿದೆ. ಯುಕಾನ್ ನ ಫ್ರೆಂಚ್ ಸಮುದಾಯದ ಈ ಸ್ನೇಹಿತರು ನನ್ನೊಂದಿಗೆ ಸೇರಿಕೊಂಡಿದ್ದು ಸಂತೋಷ ಎಂದು ಹೇಳಿದ್ದಾರೆ.
PublicNext
10/02/2021 12:09 pm