ಯಾರಲ್ಲಿ ಎಂತಹ ಪ್ರತಿಭೆ ಅಡಗಿದೆ ಅಂತ ನೋಡಿದ ತಕ್ಷಣವೇ ಹೇಳಲು ಅಸಾಧ್ಯ. ಈ ಅನುಭವ ನಮಗೂ ಆಗಿರುತ್ತದೆ. ಇಂಥ ಸೂಪರ್ ಟ್ಯಾಲೆಂಟ್ ಯೋಧರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ಯಾಮ್ ಡೇನಿಯಲ್ ಎಂಬ ಸೈನಿಕ ಡ್ರಮ್ಸ್ ಬಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಅನ್ನು 'Soldierathon' ಎಂಬ ಟ್ವಿಟ್ಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ಇದರಲ್ಲಿ ಯೋಧ ಸ್ಯಾಮ್ ಡೇನಿಯಲ್ ಅವರು ಡ್ರಮ್ಸ್ ಬಾರಿಸುವುದಷ್ಟೇ ಅಲ್ಲ, ಯಾವುದೇ ದೋಷವಿಲ್ಲದೆ ಸುಲಭವಾಗಿ ಒಂದು ರಾಗದಿಂದ ಇನ್ನೊಂದಕ್ಕೆ ಪರಿವರ್ತನೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ಡ್ರಮ್ ಸ್ಟಿಕ್‌ಗಳನ್ನು ನೆಲದ ಮೇಲೆ ಬೀಳಿಸದೆ ಕೆಲವು ತಂತ್ರಗಳನ್ನು ಮಾಡಿದ ದೃಶ್ಯಗಳು ಪ್ರೇಕ್ಷಕರು ಹಾಗೂ ನೆಟ್ಟಿಗರ ಮನ ಗೆದ್ದಿವೆ.
ಸ್ಯಾಮ್ ಅವರ ಈ ಸೂಪರ್ ಟ್ಯಾಲೆಂಟ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
09/02/2021 08:44 pm