ಸುತ್ತಲಿನ ಪರಿಸರ ಮಕ್ಕಳ ಮೇಲೆ ಪ್ರಭಾವ ಬೀರುತ್ತೆ. ಮಗುವಿನ ವ್ಯಕ್ತಿತ್ವ, ಸ್ವಭಾವ ಹಾಗೂ ವರ್ತನೆಗಳನ್ನು ರೂಪಿಸುತ್ತೆ ಅಂತಾರಲ್ಲ. ಅದಕ್ಕೆ ಈ ವಿಡಿಯೋ ಉದಾಹರಣೆ.
ಕಳ್ಳ ಸಾಕಿದ ಗಿಣಿ ಕ್ರೂರಿಯಾಗುತ್ತೆ. ಋಷಿಮುನಿ ಸಾಕಿದ ಗಿಣಿ ಸನ್ನಡತೆ ಕಲಿಯುತ್ತೆ ಎಂಬ ಮಾತು ಎಂದೆಂದೂ ಸುಳ್ಳಲ್ಲ. ಕರಾವಳಿ ಭಾಗದ ಈ ಮಗು ವೇದಿಕೆಯಲ್ಲಿ ನಡೆದ ಯಕ್ಷಗಾನ ನೋಡುತ್ತ ಅದನ್ನೇ ಅನುಕರಿಸುತ್ತಿದೆ. ಯಕ್ಷಗಾನ ಕಲಾವಿದರು ಹೆಜ್ಜೆ ಹಾಕಿದಂತೆ ತಾನೂ ತನ್ಮಯಳಾಗಿ, ಮೈ ಮರೆತು ಹೆಜ್ಜೆ ಹಾಕುತ್ತಿದೆ. ಈಗಿನ ಮಕ್ಕಳಿಗೆ ಹಾದಿ ತಪ್ಪಲು ಸಾವಿರ ದಾರಿಗಳಿವೆ. ಅಂತಾದ್ದರಲ್ಲಿ ಮಕ್ಕಳ ಮೇಲೆ ಸದಾ ನಿಗಾ ವಹಿಸಬೇಕು. ಜತೆಗೆ ಇಂತಹ ಸಾಂಸ್ಕೃತಿಕ ವಾತಾವರಣದ ಅಭಿರುಚಿಯನ್ನ ಮಕ್ಕಳಲ್ಲಿ ಬೆಳೆಸಬೇಕು ಅನ್ನೋದನ್ನ ಈ ವಿಡಿಯೋ ನಮಗೆಲ್ಲ ಕಲಿಸಿಕೊಡುತ್ತಿದೆ ಅಲ್ವೇ?
PublicNext
09/02/2021 07:00 pm