ಹಸಿವು ಪ್ರತಿಯೊಂದು ಜೀವಿಗೂ ಬದುಕಿನ ಪಾಠ ಕಲಿಸುತ್ತದೆ. ಹೊಟ್ಟೆ ಹಸಿದವರ ಹಸಿವು ನೀಗಿಸುವವರೇ ಎಷ್ಟೋ ಜನರಿಗೆ ದೇವರಾಗಿರುತ್ತಾರೆ. ತಾಯಿ ಮಗುವಿನ ವಾತ್ಸಲ್ಯಕ್ಕೆ ಬೆಲೆಯೇ ಕಟ್ಟಲಾಗುವುದಿಲ್ಲ.
ಮನುಷ್ಯರಂತೆಯೇ ಮೂಕ ಪ್ರಾಣಿಗಳಿಗೆ ಕೂಡ ತನ್ನ ಮರಿಗಳ ಮೇಲೆ ಭಾವನೆಗಳಿರುತ್ತದೆ ಎಂಬುದಕ್ಕೆ ಶ್ವಾನವೊಂದು ಸಾಕ್ಷಿಯಾಗದೆ. ಆದರೆ ಶ್ವಾನ ಇಲ್ಲಿ ತನ್ನ ಮರಿಯನ್ನು ಹೊರತುಪಡಿಸಿ ಮತ್ತೊಂದು ಪ್ರಾಣಿಗೆ ಪ್ರೀತಿಯಧಾರೆ ಎರೆದಿದೆ.
ಶ್ವಾನವೊಂದು ಬೆಕ್ಕಿನ ಮರಿಗೆ ಹಾಲುಣಿಸುತ್ತಿರುವ ಅಪರೂಪದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೈಜೀರಿಯಾದ ಹಳ್ಳಿಯೊಂದರಲ್ಲಿ ಶ್ವಾನ ಬೆಕ್ಕಿನ ಮರಿಗೆ ಹಾಲುಣಿಸುವ ಮೂಲಕವಾಗಿ ಸುದ್ದಿಯಾಗಿದೆ. 32 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ನಾಯಿ ಬೆಕ್ಕಿನ ಮರಿಗೆ ಪ್ರೀತಿಯಿಂದ ಹಾಲುಣಿಸುತ್ತಿದೆ. ಸುತ್ತಮುತ್ತಲಿನ ಜನರು ಈ ದೃಶ್ಯವನ್ನು ಆಶ್ಚರ್ಯ ಮತ್ತು ಬೆರಗಾಗಿ ನೋಡುತ್ತಿರುವುದನ್ನು ಕಾಣಬಹದು.
PublicNext
27/01/2021 07:24 pm