ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳ್ಳಿ ಹುಡುಗರ ತಾಕತ್ತು: ಖಡಕ್ ರೊಟ್ಟಿಯ ಗಮ್ಮತ್ತು..!

-ನಾಗರಾಜ್ ತಳುಗೇರಿ

ನಮ್ಮ ಹಳ್ಳಿಗಳಲ್ಲಿ ಇಂತಹ ಯಾವುದಾದರೊ‌ಂದು ಟ್ಯಾಲೆಂಟ್ ಇರುವ ಮಕ್ಕಳು ಇದ್ದೇ ಇರ್ತಾರೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯಲ್ಲಿ ಇದನ್ನ ಲಗಾಟಿ ಹೊಡೆಯೋದು ಅಂತಾರೆ. ಹೀಗೆ ಲಾಂಗ್ ಜಂಪ್, ಹಿಪ್ ಹಾಪ್ ಜಂಪ್ ಮಾಡುತ್ತಿರುವ ಈ ಹುಡುಗನಿಗೆ ಅದೆಷ್ಟರ ಮಟ್ಟಿಗೆ ಭಂಡ ಧೈರ್ಯ ಇರಬಹುದು ನೋಡಿ. ಅದು ಕೂಡ ಮಣ್ಣು ಹಾಕಲಾದ ಇಳಿಜಾರಿನ ಪ್ರದೇಶದಲ್ಲಿ ಈ ಪಾಟಿ ಲಗಾಟಿ ಹೊಡೀತಾನೆ ಅಂದ್ರೆ ಈ ಹುಡುಗ ಅದೆಷ್ಟರ ಮಟ್ಟಿಗೆ ಪ್ರ್ಯಾಕ್ಟೀಸ್ ಮಾಡಿರಬಹುದು..?ಇವನೇನು ಅಂತರಾಷ್ಟ್ರೀಯ ಮಟ್ಟದ ತರಬೇತುದಾರರಿಂದ ತರಬೇತಿ ಪಡೆದಿಲ್ಲ. ಪಕ್ಕಾ ಪ್ರೊಫೆಶನಲ್ ತರಬೇತಿ ಪಡೆದಿದ್ರೆ ಇನ್ನೂ ಏನೇನು ಮಾಡ್ತಿದ್ನೋ ಏನೋ..!

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ ಜನ ಅಲೆಲೆಲೆಲೆಲೆಲೆಲೆ ಎಂದು ಕಣ್ಣಗಲಿಸುತ್ತಿದ್ದಾರೆ. ಇನ್ನೂ ಕೆಲವರು ಬಪ್ಪರೇ ಗಂಡಮಗನ ಎನ್ನುತ್ತ ಶಹಬ್ಬಾಷ್ ಗಿರಿ ಕೊಡುತ್ತಿದ್ದಾರೆ.‌ ಈ ಬಗ್ಗೆ ತೀವ್ರ ಆಸಕ್ತಿ ಮೂಡಿಸಿಕೊಂಡ ಇನ್ನೂ ಹಲವರು 'ಎಲ್ಯಾಂವೋ ಪಾ ಇಂವಾ' ಎನ್ನುತ್ತ ಈ ಹುಡುಗನ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

22/01/2021 09:05 pm

Cinque Terre

165.22 K

Cinque Terre

31

ಸಂಬಂಧಿತ ಸುದ್ದಿ