ಗಾಜಿಯಾಬಾದ್ : ತಂತ್ರಜ್ಞಾನದ ಕ್ಷೇತ್ರದಲ್ಲಿ ಕ್ರಾಂತಿಯೇ ಉಂಟಾಗಿದೆ.ಹೆಜ್ಜೆ ಹೆಜ್ಜೆಗೂ ಸಾಕಷ್ಟು ಕಂಡರಿಯದ ಬದಲಾವಣೆಗಳನ್ನು ಕಾಣುತ್ತಲೇ ಇದ್ದೇವೆ ಇದರ ಮಧ್ಯೆ ಇದೀಗ ಕುಣಿಯುವ ಕಾರೊಂದು ರಸ್ತೆಗೆ ಇಳಿದು ಎಲ್ಲರು ಹೆಬ್ಬೇರಿಸುವಂತೆ ಮಾಡಿದೆ.
ಹೌದು ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಮಂಗಳವಾರ ಡ್ಯಾನ್ಸಿಂಗ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದು, ಕಾರ್ ಮಾಲಿಕನಿಗೆ 41,500 ರೂಪಾಯಿ ದಂಡ ವಿಧಿಸಿದ್ದಾರೆ.
ಕೆಲವು ಮಂದಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ರಸ್ತೆಯಲ್ಲಿ ಸಾಹಸ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಾರೆ.
ಹೀಗಾಗಿ ಸ್ಥಳೀಯರು ನೀಡಿದ ದೂರು ಸ್ವೀಕರಿಸಿದ ಬಳಿಕ ಪೊಲೀಸರು ತಕ್ಷಣ ಕಾರನ್ನು ವಶಕ್ಕೆ ಪಡೆಯಲಾಗಿದೆ.ಕಾರಿನ ಮಾಲಿಕ ದೆಹಲಿಯ ನಿವಾಸಿ ನಸುಮ್ ಅಹ್ಮದ್ ಎಂದು ಗುರುತಿಸಲಾಗಿದೆ.
ತನ್ನ ಕಾರನ್ನು ಡ್ಯಾನ್ಸಿಂಗ್ ಕಾರಿನ ರೀತಿ ಮಾರ್ಪಾಡು ಮಾಡಿಕೊಂಡು ಜೋರಾದ ಮ್ಯೂಸಿಕ್ ಹಾಕಿಕೊಂಡು ಅಕ್ಕಪಕ್ಕದವರಿಗೆ ತೊಂದರೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರು ವಾಹನವನ್ನು ಸೀಜ್ ಮಾಡಲಾಗಿದ್ದು, ದಂಡವನ್ನು ವಿಧಿಸಲಾಗಿದೆ.
ಯಾರಾದರೂ ವಾಹನವನ್ನು ಸ್ಟಿಕರ್ ಗಳ ಮೂಲಕ ಮಾರ್ಪಾಡು ಮಾಡಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
PublicNext
31/12/2020 05:12 pm