ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಕಸದ ಜೊತೆ ನಾನೂ ಫ್ರೀ !"

ಕಸ ಹಾಕೋ ತಮ್ಮಾ ಅಂದ್ರೆ... ಆ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೆ, ನೀವೂ ಶಾಕ್ ಆಗುವುದರ ಜೊತೆಗೆ ನಗೆಗಡಲಲ್ಲಿ ತೇಲುವುದಂತೂ ಗ್ಯಾರಂಟಿ.

ಎಸ್, ಈ ವೀಡಿಯೊ ನೋಡಿ. ಕಸದ ಜೊತೆಗೆ ಆಸಾಮಿ ಕೂಡ ಕಸದ ವ್ಯಾನ್ ಗೇ ಕರೆಕ್ಟಾಗಿ ಬಿದ್ದಿದ್ದಾರೆ.

ಮೊದಲ ಮಹಡಿಯಿಂದ ಕಸ ಎಸೆಯಲು ಮುಂದಾದ ಆ ಮಹಾಶಯ, ಏಕಾಏಕಿ ಬ್ಯಾಲೆನ್ಸ್ ತಪ್ಪಿ ತಾವೇ ಕಸ ತುಂಬುವ ವ್ಯಾನ್ ಗೆ ಬಿದ್ದು ಬಿಟ್ಟಿದ್ದಾರೆ!

ಆಯತಪ್ಪಿ ಕಸದ ವಾಹನಕ್ಕೆ ಬಿದ್ದ ಆ ವ್ಯಕ್ತಿಯನ್ನು ಪೌರ ಕಾರ್ಮಿಕರೇ ಮೇಲೆತ್ತಿದ್ದಾರೆ.ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗುತ್ತಿದ್ದು, ವೀಡಿಯೊ ಮಾತ್ರ ವೈರಲ್ ಆಗಿದೆ.

ಸದ್ಯ ಈ ವೀಡಿಯೊ ನೋಡಿ ಶಾಕ್ ಆದವರಿಗಿಂತಲೂ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡವರೇ ಹೆಚ್ಚು. ನೀವೂ ವೀಡಿಯೋ ನೋಡಿದಿರಲ್ಲವೇ? ಹಾಗಾದರೆ, ಹುಷಾರಾಗಿ ಕಸ ಹಾಕಿ.

Edited By : Manjunath H D
PublicNext

PublicNext

28/12/2020 03:43 pm

Cinque Terre

69.51 K

Cinque Terre

1

ಸಂಬಂಧಿತ ಸುದ್ದಿ