ಯಾರಾದ್ರೂ ಜಗಳ ಮಾಡ್ತಾ ಇದ್ರೆ ಸಾಕು 'ಏನ್ ಕಚ್ಯಾಡ್ತಿರಲೇ ನಾಯಿ ಗತೆ' ಎನ್ನುತ್ತೇವೆ. ಆದರೆ ಇಲ್ಲೊಂದು ಬೀದಿ ನಾಯಿ ಎಷ್ಟು ಜಾಣತನದಿಂದ ಜಡೆ ಜಗಳನ್ನು ಬಿಡಿಸಿದೆ ಅಂತ ನೀವೇ ನೋಡಿ...
ಅಮೆರಿಕದ ಎಲ್ ಸಾಲ್ವಡಾರ್ ಪಟ್ಟಣದಲ್ಲಿ ಇಬ್ಬರು ಯುವತಿಯರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರು. ಇಲ್ಲಿದ್ದ ಜನರು ಅವರ ಕಿತ್ತಾಟವನ್ನು ತಡೆಯದೇ ಸುಮ್ಮನೆ ನೋಡುತ್ತಾ ನಿಂತಿದ್ದರು.
ಈ ವೇಳೆ ಬೀದಿ ನಾಯಿಯೊಂದು ಯುವತಿಯ ಹಿಂಭಾಗದಿಂದ ಪ್ಯಾಂಟ್ ಎಳೆದು ಜಗಳಕ್ಕೆ ಫುಲ್ ಸ್ಟಾಪ್ ಹಾಕಿದೆ. ಈ ಜಾಣ ನಾಯಿಗೆ ಮತ್ತೆರಡು ಶ್ವಾನಗಳು ಸಾಥ್ ನೀಡಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಭಾರೀ ನಗೆ ಹೊಮ್ಮಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಣ ನಾಯಿಗಳ ಬಗ್ಗೆ ಕೆಲ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನಡು ರಸ್ತೆಯಲ್ಲಿ ಕಿತ್ತಾಡಿಕೊಂಡ ಯುವತಿಯರ ಕಾಲೆಳೆದಿದ್ದಾರೆ.
PublicNext
25/12/2020 04:47 pm