ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗಳೇ ನೀನೆಂದರೆ ಮುದ್ದು, ಮೀರಬೇಡ ಹದ್ದು

ಪ್ರತಿಯೊಬ್ಬ ತಂದೆ ತಾಯಿಗಳು ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುತ್ತಾರೆ.ಹೆತ್ತವರಿಗೆ ಹೆಣ್ಣು ಮಕ್ಕಳ ಮೇಲೆ ತುಸು ಹೆಚ್ಚು ಪ್ರೀತಿ ಎಂದರೆ ಅತಿಶಯೋಕ್ತಿಯಾಗಲಾರದು ತಾಯಿಯಾದವಳು ಮಗ ಹಾಗೂ ಮಗಳನ್ನು ಸಮಾನವಾಗಿ ಕಂಡರೂ ಅಪ್ಪನಿಗೆ ಮಗಳೆಂದರೆ ತುಸು ಜಾಸ್ತಿಯೇ ಪ್ರೀತಿ.

ಈ ಮುದ್ದು ಮಗಳ ಬದುಕು ಹಸನಾಗಿರಲೆಂದು ನಿತ್ಯ ಹಂಬಲಿಸುವ ಹೆತ್ತವರಿಗೆ ಮಕ್ಕಳು ಕೃತಜ್ಞರಾಗಿರುವುದು ಮಕ್ಕಳ ಧರ್ಮ.

ಹೆತ್ತವರೆನಿಸಿಕೊಂಡ ಎಲ್ಲರೂ ನನ್ನ ಮಗಳು ಕಲ್ಪನಾ ಚಾವ್ಲಾ, ಮೇಡಂ ಕ್ಯೂರಿ, ರಾಣಿ ಚನ್ನಮ್ಮ ಹೀಗೆ ಹೆಣ್ಣೆನ್ನುವ ಅಳುಕನ್ನು ಮರೆತು ಸಾಧನೆ ಮಾಡಿದ ನಾರಿಯರಂತೆ ತಮ್ಮ ಮಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲಿ ಎಂದು ನಿತ್ಯ ಪ್ರಾರ್ಥಿಸುತ್ತಿರುತ್ತಾರೆ.

ಆ ಸನ್ಮಾರ್ಗದಲ್ಲಿಯೇ ಮಗಳನ್ನಾ ಬೆಳೆಸುತ್ತಿರುತ್ತಾರೆ. ಇಲ್ಲೊಂದು ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಮಗಳ ಮೇಲೆ ಮಾತಾಪಿತೃಗಳ ಪ್ರೀತಿ ಎಂಥಹದ್ದು ಎಂದು ತಿಳಿಯುತ್ತದೆ.

ಮಹಾರಾಷ್ಟ್ರದಲ್ಲಿ ಮಗಳಿಗೆ 18 ವರ್ಷ ತುಂಬಿದಾಗ ಈ ಆಚರಣೆ ಮಾಡುವ ಪದ್ಧತಿ ಜಾಲ್ತಿಯಲ್ಲಿದೆ.ವಯಸ್ಕ ಮಗಳು ಭವಿಷ್ಯದಲ್ಲಿ ತಪ್ಪು ಹೆಜ್ಜೆ ಇಡದೆ ಸುಸಂಸ್ಕೃತ ಜೀವನ ನಡೆಸುವಂತೆ ಮನದಟ್ಟು ಮಾಡಿಸುವ ಸಂಪ್ರದಾಯ ಇದಾಗಿದೆ.

ಇದರಿಂದ ಮಗಳಿಗೆ ಹೆತ್ತವರ ಬಗ್ಗೆ ಸದ್ಭಾವನೆ, ಗೌರವ, ಜೊತೆಗೆ ಕುಟುಂಬ ಮತ್ತು ಸಮಾಜದಲ್ಲೂ ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವುದು ಇವರ ನಂಬಿಕೆ.

ಓ ಮಗಳೇ ಮುರಿಯದಿರು ನಿನ್ನ ಹೆತ್ತವರ ನಂಬಿಕೆ. ಆ ಮುಗ್ಧ ಜೀವಗಳು ನಿನ್ನ ಮೇಲೆ ಜೀವವನ್ನೇ ಇಟ್ಟಿದ್ದಾರೆ.

ಆ ಹೃದಯವನ್ನು ನೋಯಿಸದಿರು. ಹೆತ್ತವರ ಋಣ ತೀರಿಸಲು ನಿನ್ನಗಿದೂ ಒಂದು ಸುವರ್ಣಾವಕಾಶ. ಅನ್ಯರ ಪ್ರೀತಿಗೆ ಮರುಳಾಗಿ ಹೆತ್ತರ ಮಮತೆ, ಪ್ರೀತಿಯನ್ನ ಮರೆಯದಿರು..ಮರೆಯದಿರು..ಮರೆಯದಿರು…

Edited By : Manjunath H D
PublicNext

PublicNext

17/12/2020 07:19 pm

Cinque Terre

123.63 K

Cinque Terre

6

ಸಂಬಂಧಿತ ಸುದ್ದಿ