ನಾಯಿ ಪ್ರಾಮಾಣಿಕತೆಗೆ ಬಲು ಫೇಮಸ್ಸು ಎಂಬುದು ಎಲ್ಲರಿಗೂ ಗೊತ್ತು. ಅದಕ್ಕಿಂತ ನಿಯತ್ತಾದ ಇನ್ನೊಂದು ಪ್ರಾಣಿ ಬಹುತೇಕವಾಗಿ ಇಲ್ಲ ಅನ್ಸುತ್ತೆ. ಪ್ರಾಮಾಣಿಕತೆ ಅಷ್ಟೇ ಅಲ್ಲ, ನಾಯಿ ಶಿಸ್ತಿನ ಸಿಪಾಯಿಯೂ ಹೌದು. ಅದಕ್ಕೆ ಈಗ ಉತ್ತಮ ಉದಾಹರಣೆಯೂ ಸಿಕ್ಕಿದೆ.
ಈ ವೀಡಿಯೊ ನೋಡಿ... ನಾಯಿಯೊಂದು ರಸ್ತೆ ದಾಟಬೇಕಿದೆ. ಆಗ ಸಿಗ್ನಲ್ ಬೀಳುವವರೆಗೂ ರಸ್ತೆ ಪಕ್ಕದಲ್ಲಿ ಕಾಯುತ್ತಾ ಕೂತಿದೆ. ಕೆಂಪು ದೀಪ ಹೊತ್ತಿಕೊಂಡ ನಂತರವಷ್ಟೇ ನಾಯಿ ಆರಾಮವಾಗಿ ರಸ್ತೆ ದಾಟಿದೆ.
ಮಾತು ಬಾರದ ಶ್ವಾನದಲ್ಲಿರುವ ಈ ಮಟ್ಟಿಗಿನ ಶಿಸ್ತು- ನಿಯಮ ಪಾಲನೆ ನಮ್ಮಲ್ಲಿನ ಕೆಲವರಲ್ಲಿ ಇನ್ನೂ ಬಂದಿಲ್ಲ ಅನ್ಸುತ್ತೆ ಅಲ್ವಾ?. ಸದ್ಯ, ಈ ವೀಡಿಯೊ ವೈರಲ್ ಆಗಿದೆ.
PublicNext
17/12/2020 01:39 pm