ಮನುಷ್ಯ ಬುದ್ಧಿವಂತಿಕೆಯಲ್ಲಿ ಬಲಿಷ್ಟ. ಹುಲಿಗಳು ದೈಹಿಕವಾಗಿ ಬಲಿಷ್ಟ. ನಾವು ಇಂತಿಷ್ಟು ಜಾಗವನ್ನ ಕೊಂಡು ಇದು ನನ್ನದೇ ಸಾಮ್ರಾಜ್ಯ ಎನ್ನುತ್ತೇವೆ. ಅದಕ್ಕಾಗಿ ನಮ್ಮಲ್ಲೂ ಕದನಗಳು ನಡೆಯುತ್ತವೆ. ಅದರಂತೆ ಈ ಹುಲಿಗಳೂ ಕಾದಾಡುತ್ತಿವೆ.
ತನ್ನ ಅಡ್ಡೆಯಲ್ಲಿ ಇನ್ನೊಂದು ಗಂಡು ಹುಲಿ ಬಂದರೆ ಎರಡೂ ಹುಲಿಗಳು ಹೀಗೆ ಕುಸ್ತಿ ಹಿಡಿಯುತ್ತವೆ. ತನ್ನ ಬಲಿಷ್ಟ ಪಂಜಾ ಉಗುರುಗಳಿಂದ ಮರದ ಕಾಂಡ ಪರಚುವ ಹುಲಿಗಳು ಅದರ ಬುಡದಲ್ಲಿ ಮೂತ್ರ ಮಾಡುತ್ತವೆ.
ನಂತರ ಈ ಜಾಗ ನನ್ನದೇ ಎಂದುಕೊಂಡು ರಾಜನಾಗಿ ಮೆರೆಯುತ್ತದೆ. ಆ ಜಾಗದಲ್ಲಿ ಮತ್ತೊಂದು ಗಂಡು ಹುಲಿ ಅತಿಕ್ರಮಣ ಮಾಡಲು ಬಂದರೆ ಅದರೊಂದಿಗೆ ಹುಲಿ ಹೀಗೆ ಕಾದಾಡುತ್ತದೆ. ಒಂದಕ್ಕೊಂದು ಮೈ ಪರಚಿಕೊಳ್ಳುತ್ತವೆ.
ಈ ವೇಳೆ ಹುಲಿಯ ಸಾವು ಕೂಡಾ ಆಗಬಹುದು. ಈ ರೀತಿಯ ಕುಸ್ತಿ ಮುಗಿದ ಮೇಲೆ ಸೋಲು ಕಂಡ ಹುಲಿ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ. ಇದಿಷ್ಟು ಈ ವ್ಯಾಘ್ರ ಕಾದಾಟದ ಅಸಲೀಯತ್ತು. ಸದ್ಯ ಈ ವಿಡೀಯೋ ಎಲ್ಲ ಕಡೆ ವೈರಲ್ ಆಗಿದೆ.
PublicNext
12/12/2020 10:59 am