ಆನೆಗೆ ಅಗಾಧ ತಾಳ್ಮೆ ಇರುತ್ತೆ ಅನ್ನೋದು ಸತ್ಯ. ಆದ್ರೆ ಅದರ ತಲೆ ಕೆಟ್ರೆ ದೊಡ್ಡ ಅನಾಹುತವೇ ಆಗುತ್ತೆ ಅನ್ನೋದು ಕೂಡ ಅಷ್ಟೇ ಅಷ್ಟೇ ಸತ್ಯ. ಅದಕ್ಕೆ ಒಂದೊಳ್ಳೆ ಉದಾಹರಣೆ ಇಲ್ಲಿದೆ ನೋಡಿ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಮದುವೆ ಸಂಭ್ರಮಕ್ಕಾಗಿ ಮದುಮಗನನ್ನ ಆನೆ ಮೇಲೆ ಕೂರಿಸಿ ರಾಜಗಾಂಭೀರ್ಯನಂತೆ ಮೆರವಣಿಗೆ ಮಾಡಲಾಗ್ತಾ ಇತ್ತು. ಅದೇನಾಯ್ತೋ ಏನೋ? ಒಮ್ಮೊಂದೊಮ್ಮೆಲೇ ಆನೆ ತಾಳ್ಮೆ ಕಳೆದುಕೊಂಡಿದೆ. ಇದ್ದಕ್ಕಿದ್ದಂತೆ ಓಡಲಾರಂಭಿಸಿದೆ. ನಡುವೆ ಬಂದ ವ್ಯಕ್ತಿಯನ್ನು ಫುಟ್ಬಾಲ್ ಒದ್ದಂತೆ ಒದ್ದಿದೆ. ಆನೆ ಓಡಾಟಕ್ಕೆ ಮೇಲೆ ಕೂತಿದ್ದ ಮದುಮಗ ಸೀದಾ ನೆಲಕ್ಕೆ ಬಿದ್ದಿದ್ದಾನೆ. ಆದ್ರೆ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ.
PublicNext
07/12/2020 04:25 pm