ನಾವು ಮನುಷ್ಯರು ಯಾವಾಗಲೂ ಹೀಗೆಯೇ...ಮತ್ಸರಿಗಳು, ಅತಿವ್ಯಾಮೋಹಿಗಳು. ಬೇಕಿಲ್ಲದಿರುವುದು, ಬೇಡವಾದದ್ದು ಎಲ್ಲವೂ ನಮಗೆ ಇರಲೇಬೇಕೆಂದು ಹಂಬಲಿಸುತ್ತಿದ್ದೇವೆ. ಆದ್ರೆ ಈ ಜೇಡರ ಹುಳುವನ್ನ ನೋಡಿ. ತನ್ನದಲ್ಲದ ಬೇಟೆ ತನ್ನದೇ ಬಲೆಯಲ್ಲಿ ಬಿದ್ದರೂ ಅದನ್ನ ಗೌರವಯುತವಾಗಿ ಕಳಿಸಿಕೊಟ್ಟಿದೆ.
ಈ ದೃಶ್ಯವನ್ನ ಪೂರ್ತಿ ನೋಡಿದ್ರೆ ನೀವು ಹಲವಾರು ಪಾಠಗಳನ್ನು ಕಲಿಯುತ್ತೀರಿ. ಕ್ರಿಮಿಕೀಟಗಳನ್ನು ಹುಡುಕಾಡುತ್ತ ಬಂದ ಕಪ್ಪೆ ಅಚಾನಕ್ಕಾಗಿ ಪಕ್ಕದ ಜೇಡರ ಬಲೆಯಲ್ಲಿ ಸಿಲುಕಿದೆ. ಅಲ್ಲಿಂದ ಹೊರಬರಲು ಶತಪ್ರಯತ್ನ ಮಾಡಿದೆ. ಕೊನೆಗೆ ಒದ್ದಾಡಿ ಒದ್ದಾಡಿ ಸುಮ್ಮನಾಗಿದೆ. ಇದನ್ನ ಗಮನಿಸಿ ಅಲ್ಲಿಗೆ ಬಂದ ಜೇಡರ ಹುಳು ತಾನೇ ಹೆಣೆದ ಬಲೆಯ ಒಂದೊಂದೇ ಎಳೆಗಳನ್ನು ತುಂಡರಿಸಿ ಕಪ್ಪೆಯನ್ನ ಬಂಧಮುಕ್ತಗೊಳಿಸಿದೆ. ಆದ್ರೆ ಹೀಗೆ ತನ್ನ ಖೆಡ್ಡಾದಲ್ಲಿ ಸಿಕ್ಕ ಕಪ್ಪೆಯನ್ನ ಜೇಡರ ಹುಳು ಕಿಚಾಯಿಸಬಹುದಿತ್ತು. ಹಿಂಸೆ ನೀಡಬಹುದಿತ್ತು. ಅಥವಾ ಕೊಲ್ಲಬಹುದಿತ್ತು. ಆದ್ರೆ ಅದೇನನ್ನೂ ಮಾಡದೇ ತನ್ನ ಬಲೆ ಹರಿದು ಕಪ್ಪೆಯನ್ನು ಬಂಧ ಮುಕ್ತಗೊಳಿಸಿದೆ. ತನ್ನದಲ್ಲದನ್ನ ಗೌರವದಿಂದ ಬಿಟ್ಟು ಕೊಡುವ ಇಂತಹ ಪ್ರವೃತ್ತಿ ಮನುಷ್ಯನಲ್ಲಿ ಇದೆಯಾ?
PublicNext
04/12/2020 09:48 pm