ಒಮ್ಮೊಮ್ಮೆ ಚಾಲಾಕಿ ಕಳ್ಳರು ಕೂಡ ಸಿಕ್ಕಿಬಿದ್ದು ಪಜೀತಿಗೆ ಸಿಲುಕಿಬಿಡುತ್ತಾರೆ. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಡು ರಸ್ತೆಯಲ್ಲಿ ಕಳ್ಳನ ಪರದಾಟ ನೋಡಿ ನಗು ಬರುತ್ತದೆ. ಇನ್ನು ಹೆಣ್ಣುಮಕ್ಕಳು ಹಿಡಿದ ಪಟ್ಟನ್ನು ಬಿಡುವುದಿಲ್ಲ ಅನ್ನೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ.
ಮೊಪೆಡ್‌ನಲ್ಲಿ ಬಂದ ಯುವತಿ ರೋಡ್ ಕ್ರಾಸ್ ಮಾಡಲು ಕಾಯುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ಬೈಕ್‌ನಲ್ಲಿ ಬಂದ ಕಳ್ಳನೋರ್ವ ಸರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸುತ್ತಾನೆ. ಅದೃಷ್ಟವಶಾತ್ ಇದೇ ವೇಳೆ ಆತನ ಮುಂದೆ ಮತ್ತೊಂದು ಬೈಕ್ ನಿಲ್ಲುತ್ತದೆ. ಹೀಗಾಗಿ ಚಾಲಕಿ ಕಳ್ಳ ಸಿಕ್ಕಿ ಬೀಳುತ್ತಾನೆ. ಆದರೆ ಚಾಕು ಹಿಡಿದು ಹಲ್ಲೆಗೆ ಯತ್ನಿಸಿ ಅಲ್ಲಿಂದ ಪರಾರಿಯಾಗಲು ಮುಂದಾಗುತ್ತಾನೆ. ಸರ್ವಪ್ರಯತ್ನಗಳ ನಂತರವೂ ಕಳ್ಳ ಸಾರ್ವಜನಿಕರ ಕೈಗೆ ಸಿಕ್ಕು ಗೂಸಾ ತಿನ್ನುತ್ತಾನೆ.
ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
PublicNext
02/12/2020 12:07 pm