ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಲ್ಲರೆ ಹಣಕ್ಕಾಗಿ ಪ್ರಯಾಣಿಕ-ಕಂಡಕ್ಟರ್​ ಮಧ್ಯೆ ಫೈಟ್

ಸಾಮಾನ್ಯವಾಗಿ ಸಾರಿಗೆ ಬಸ್‌ನಲ್ಲಿ ಚಿಲ್ಲರೆ ಸಮಸ್ಯೆ ಎದುರಾದರೆ ಕಂಡಕ್ಟರ್‌ಗಳು ಟಿಕೆಟ್ ಮೇಲೆ ಬಾಕಿ ಹಣ ಬರೆದುಕೊಡುತ್ತಾರೆ. ಒಮ್ಮೊಮ್ಮೆ ಆ ಚಿಲ್ಲರೆ ಹಣವನ್ನು ಪ್ರಯಾಣಿಕರು ಮರೆತು ಹೋಗುವುದು ಉಂಟು... ಆದ್ರೆ ಇದೇ ಚಿಲ್ಲರೆ ಹಣಕ್ಕಾಗಿ ಕಂಡಕ್ಟರ್ ಹಾಗೂ ಪ್ರಯಾಣಿಕರೊಬ್ಬರು ಕಿತ್ತಾಡಿಕೊಂಡಿದ್ದಾರೆ.

ಚಿಲ್ಲರೆಗಾಗಿ ಇವರಿಬ್ಬರೂ ಹೊಡೆದಾಟ ನಡೆಸಿದ್ದನ್ನು ಸ್ಥಳೀಯರು ನಿಂತು ನೋಡಿದ್ದಾರೆ. ಅಷ್ಟೇ ಅಲ್ಲದೆ ಮೊಬೈಲ್​ನಲ್ಲಿ ದೃಶ್ಯ ಸೆರೆ ಹಿಡಿದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದ ಹಳೇ ಕೋರ್ಟ್​ ಸರ್ಕಲ್​ ಬಳಿ ಈ ಘಟನೆ ನಡೆದಿದೆ. ಪ್ರಯಾಣಿಕನೊಬ್ಬ ಟಿಕೆಟ್​ ಹಿಂದೆ 5 ರೂ. ಚಿಲ್ಲರೆ ಎಂದು ಕಂಡಕ್ಟರ್​ ಬರೆದುಕೊಟ್ಟಿದ್ದ. ಆದರೆ ನಂತರ ಕೇಳಿದಾಗ ಚಿಲ್ಲರೆ ಇಲ್ಲ ಎಂದು ಹೇಳಿದ್ದ. ಇದರಿಂದ ಸಿಟ್ಟಾದ ಪ್ರಯಾಣಿಕ ಸಹಜವಾಗಿಯೇ ಜಗಳ ತೆಗೆದ. ಆದರೆ ಇವರಿಬ್ಬರ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿತು.

ಇಬ್ಬರೂ ಬಸ್​ನಿಂದ ಇಳಿದು, ನಡುರಸ್ತೆಯಲ್ಲಿ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಬಸ್​ ಡ್ರೈವರ್ ಹಾಗೂ ಸ್ಥಳೀಯರು​ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದರೂ ಕೆಲವು ಹೊತ್ತು ಇವರಿಬ್ಬರೂ ಪರಸ್ಪರ ಬೈದಾಡಿಕೊಂಡು ಅಲ್ಲಿಯೇ ನಿಂತಿದ್ದರು.

Edited By : Nagesh Gaonkar
PublicNext

PublicNext

29/11/2020 06:57 pm

Cinque Terre

124.12 K

Cinque Terre

11

ಸಂಬಂಧಿತ ಸುದ್ದಿ