ಪದಪುಂಜಗಳಲ್ಲಿ ವರ್ಣಿಸಲು ಸಾಧ್ಯವಿಲ್ಲದ ಹೊಗಳಿಕೆಗೆ ನಿಲುಕದ, ಬರವಣಿಗೆಗೆ ಸಾಟಿಯಿಲ್ಲದ, ಆಲೋಚನಾ ಮಿತಿಗೂ ಸಿಕ್ಕದ,ಕಲ್ಪನಾ ಲೋಕಕ್ಕೆ ಎಟುಕದ,ಬರೆದಷ್ಟು ಬರಿಯಬೇಕೆಂದೆನಿಸುವ, ಹಾಡಿದಷ್ಟು ಹಾಡಬೇಕೆಂದೆನಿಸುವ, ಪ್ರಕೃತಿಯ ಪ್ರತಿ ರೂಪವೇ ಅಮ್ಮ.
ಪ್ರತಿಯೊಬ್ಬರಿಗೂ ಅವರ ಅಮ್ಮನೇ ಸರ್ವಸ್ವ, ಅವರೇ ಜಗತ್ತು ಪ್ರಪಂಚದಲ್ಲಿ ಅಮ್ಮನ ಹೊರತು ನಮ್ಮನ್ನು ಸಂತೈಸಲು ಮತ್ತಾವ ಶಕ್ತಿಗೂ ಸಾಧ್ಯವಿಲ್ಲ.
ಈ ಮಾತೆಯ ಋಣ ತೀರಿಸುವುದು ಅಸಾಧ್ಯ ಆದರೆ ಪ್ರತಿಯೊಬ್ಬರಿಗೂ ತಮ್ಮ ತಾಯಿಯನ್ನಾ ಚನ್ನಾಗಿ ನೋಡಿಕೊಳ್ಳುವ ಸುವರ್ಣಾವಕಾಶ ಇದೇ ಇರುತ್ತದೆ ಆ ಸಮಯವನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಿ ತಾಯಿ ಮನಸ್ಸನ್ನಾ ಖುಷಿಯಾಗಿಡಿ.
ಪ್ರೇಯಸಿ,ಮಡದಿ ಮಕ್ಕಳೊಂದಿಗೆ world tour ಮಾಡುವ ಈ ಕಾಲದಲ್ಲಿ ಇಲ್ಲೋಬ್ಬ ಮಗ ತನ್ನ ತಾಯಿಯೊಂದಿಗೆ world tour ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.
ಸದ್ಯ ಮಗ ತಾಯಿಯೊಂದಿಗೆ ಟ್ರೀಪ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.ಒಟ್ಟಿನಲ್ಲಿ ನಿಮ್ಮ ತಾಯಿಯ ಸಂತೋಷ ನಿಮ್ಮ ಕೈಯಲ್ಲಿದೆ ಜೋಪಾನ…
PublicNext
29/11/2020 10:29 am