ವಿಜಯನಗರ : ನಿನ್ನೆ ಸುರಿದ ಭಾರಿ ಮಳೆಯಿಂದ ರಸ್ತೆ ಮೇಲೆಯೇ ತುಂಬಿ ಹರಿದ ಹಳ್ಳದಲ್ಲೇ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಸಚಿವರ ಕಾರುಗಳು ಸಂಚರಿಸಿದವು.
ಬಿಜೆಪಿ ಜನಸಂಕಲ್ಪ ಯಾತ್ರೆ ಹಿನ್ನೆಲೆ ಆಗಮಿಸಿದ ಸಿಎಂ, ಹವಾಮಾನ ವೈಪರೀತ್ಯದಿಂದಾಗಿ ರಸ್ತೆ ಮೂಲಕ ಹಡಗಲಿಗೆ ಆಗಮಿಸಿದರು. ನಂತರ ಹಡಗಲಿಯಿಂದ ಹಿರೇಹಡಗಲಿಗೆ ಹೋಗುವ ಮಾರ್ಗ ಮಧ್ಯದಲ್ಲಿ ನಿನ್ನೆ ಸುರಿದ ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳದ ಮಧ್ಯೆಯೇ ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರ ಕಾರುಗಳು ಸಂಚಾರ ಮಾಡಿದವು.
PublicNext
13/10/2022 05:50 pm