ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ವಿವಾದ - ನಾಳೆ ವಿಜಯನಗರ ಜಿಲ್ಲೆ ಬಂದ್‌ಗೆ ಸಂಘಟನೆಗಳಿಂದ ಕರೆ

ವಿಜಯನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ.ಆರ್ ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿ 90ಕ್ಕೂ ಅಧಿಕ ಸಂಘಟನೆಗಳು ನಾಳೆ (ಗುರುವಾರ) ವಿಜಯನಗರ ಜಿಲ್ಲೆ ಬಂದ್‌ಗೆ ಕರೆ ನೀಡಿವೆ.

ಬಂದ್ ಕರೆ ಮುಂದಾಳತ್ವ ವಹಿಸಿಕೊಂಡಿರೋ ದಲಿತ ಸಂಘಟನೆಯ ಮುಖಂಡ ಸೋಮಶೇಖರ್ ಬಣ್ಣದಮನೆ, ಕೇಂದ್ರ ಗೃಹ ಸಚಿವ ಅಮಿಶ್ ಶಾ ಅವರು ಅಂಬೇಡ್ಕರ್ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಡೀ ಜಿಲ್ಲೆಯನ್ನು ಬಂದ್ ಮಾಡೋ ಮೂಲಕ ಖಂಡಿಸುತ್ತೇವೆ. ಬಂದ್ ವಿಚಾರಕ್ಕೆ ಈಗಾಗಲೇ ವಿಜಯನಗರ ಜಿಲ್ಲೆಯಾದ್ಯಾಂತ ನಾನಾ ಸಂಘಟನೆಗಳು ಸರಣಿ ಸಭೆಗಳು ಮಾಡಿದ್ದೇವೆ ಎಂದರು.

ಪ್ರಗತಿಪರ ಸಂಘಟನೆಗಳು, ಎಡ ಪ್ರಜಾಸತ್ತಾತ್ಮಕ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೇರಿದಂತೆ ಎಲ್ಲರೂ ಬಂದ್‌ಗೆ ಕರೆ ಕೊಟ್ಟಿದ್ದು ವಿಜಯನಗರ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟರು, ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಬಂದ್ ಆಚರಣೆ ಮಾಡಿ ಖಂಡನೆ ವ್ಯಕ್ತಪಡಿಸಲಿವೆ.

Edited By : Manjunath H D
PublicNext

PublicNext

08/01/2025 05:39 pm

Cinque Terre

36.18 K

Cinque Terre

0

ಸಂಬಂಧಿತ ಸುದ್ದಿ