ವಿಜಯನಗರ : ಪ್ರತಿಯೊಬ್ಬ ನಾಗರಿಕರು ಕೂಡ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು, ನಿಯಮ ಪಾಲನೆಯಿಂದ ಅಪಾಯಗಳು ತಪ್ಪುತ್ತವೆ ಎಂದು ವಿಜಯನಗರ ಎಎಸ್ಪಿ ಸಲೀಂಪಾಷಾ ಹೇಳಿದ್ದಾರೆ.
ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ರು.
ಅಪಘಾತದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸೋದು ಚಾಲಕರ ಧರ್ಮ, ನಾವು ನಿಯಮ ಪಾಲನೆಗೆ ಮುಂದಾಗ್ತೇವೆ, ಆಟೋ ಚಾಲಕರು, ಯೂನಿಯನ್ ನಾಯಕರು ಕೂಡ ತಮ್ಮ ಚಾಲಕರಿಗೆ ನಿಯಮ ಪಾಲನೆಗೆ ಸೂಚಿಸಿ, ಸಾರ್ವಜನಿಕರಿಗೆ ಮಾದರಿಯಾಗಬೇಕೆಂದರು.
PublicNext
04/02/2025 05:54 pm