ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಸಂಬಂಧ ತುಂಗಭದ್ರಾ ಮಂಡಳಿಯು ಕೇಂದ್ರ, ಮೂರು ರಾಜ್ಯ ಸರ್ಕಾರಗಳನ್ನು ಒಳಗೊಂಡ ತಜ್ಞರ ಸಮಿತಿ ಅಣೆಕಟ್ಟೆಯನ್ನು ವೀಕ್ಷಿಸಿತು.
ಅಣೆಕಟ್ಟೆಗೆ ಹೊಸ ಗೇಟ್ ಕೂರಿಸುವ ಸಂಪೂರ್ಣ ಹೊಣೆ ಈ ಸ್ಟ್ಯಾಡಿಂಗ್ ಎಕ್ಸ್‌ಪರ್ಟ್ ಅಡ್ವೈಸರಿ ಕಮಿಟಿ ಮೇಲೆ ಇದ್ದು, ಅಣೆಕಟ್ಟೆಯ ವಿನ್ಯಾಸ ಮತ್ತು ಇತರ ಎಲ್ಲಾ ಅಗತ್ಯದ ಮಾಹಿತಿ ಪಡೆದುಕೊಂಡಿದೆ. ಜೂನ್ ತಿಂಗಳೊಳಗೆ 19ನೇ ಗೇಟ್ ಗೆ ಅಳವಡಿಸಿದ ಸ್ಟಾಪ್ ಲಾಗ್ ಗೇಟ್ ಗೆ ಹೊಸ ಗೇಟ್ ಕೂಡಿಸೋದ್ರ ಜೊತೆಗೆ ಮೊದಲು ಎಷ್ಚು ಗೇಟ್ ಮತ್ತು ಹೇಗೆ ಅಳವಡಿಸಬೇಕು ಅನ್ನೋದನ್ನು ಸಮಿತಿ ನಿರ್ಧರಿಸುತ್ತೆ ಅಂತ ಅಣೆಕಟ್ಟೆಯ ಸೆಕ್ಷನ್ ಆಫೀಸರ್ ರಾಘವೇಂದ್ರ ಮಾಹಿತಿ ನೀಡಿದ್ರು. ಅದ್ರ ಭಾಗವಾಗಿ ಕೇಂದ್ರ ಜಲ ಆಯೋಗದ ಮಾಜಿ ಮುಖ್ಯ ಎಂಜಿನಿಯರ್ ಟಿ.ಕೆ.ಶಿವರಾಜನ್ ನೇತೃತ್ವದ ತಂಡ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಹಿನ್ನೆಲೆ: ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ತುಂಬಿ ತುಳುಕುತ್ತಿದ್ದ ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಆಗಸ್ಟ್ 10ರಂದು ರಾತ್ರಿ ನೀರಲ್ಲಿ ಕೊಚ್ಚಿಕೊಂಡು ಹೋಗಿತ್ತು. ಸುಮಾರು 70 ವರ್ಷಗಳ ಹಿಂದೆ ನಿರ್ಮಾಣವಾದ ಈ ಅಣೆಕಟ್ಟೆಗೆ ಅಂದು ಅಳವಡಿಸಿದ 33 ಕ್ರಸ್ಟ್‌ಗೇಟ್‌ಗಳು ಇಂದಿಗೂ ಇದ್ದು, ಈ ಪೈಕಿ 19ನೇ ಕ್ರಸ್ಟ್‌ಗೇಟ್‌ನ ಚೈನ್‌ಲಿಂಕ್ ಕಳಚಿ ಈ ದುರಂತ ಸಂಭವಿಸಿತ್ತು.
ಈ ಹಿಂದೆ ಇಲ್ಲೇ ಕೆಲಸ ಮಾಡಿದ್ದ ಕ್ರಸ್ಟ್‌ಗೇಟ್ ತಜ್ಞ ಕನ್ನಯ್ಯ ನಾಯ್ಡು ಮತ್ತವರ ತಂಡ ಒಂದೇ ವಾರದಲ್ಲಿ ಹರಿಯೋ ನೀರಲ್ಲಿ ಸ್ಟಾಪ್ ಲಾಗ್ ಅಳವಡಿಸಿ ನೀರು ಪೋಲಾಗೋದನ್ನ ತಡೆದಿತ್ತು.
Kshetra Samachara
08/01/2025 04:51 pm