ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿಯ ಬಳಿಯ ತುಂಗಭದ್ರಾ ನದಿಯಲ್ಲಿನ ಸ್ನಾನಘಟ್ಟದ ಬಳಿ ಪ್ರವಾಸಿಗರು ಬೀಸಾಕಿ ಹೋದ ತ್ಯಾಜ್ಯವನ್ನ ವಿದೇಶಿ ಪ್ರಜೆಗಳು ಸ್ವಚ್ಚಗೊಳಿಸಿ ಗಮನ ಸೆಳೆದಿದ್ದಾರೆ.
ದಕ್ಷಿಣ ಕಾಶಿ ಹಂಪಿಗೆ ದೇಶ - ವಿದೇಶ ಅಷ್ಟೇ ಅಲ್ಲದೇ ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರು ಬರ್ತಾರೆ. ಬಂದಂತಹ ಸಂದರ್ಭದಲ್ಲಿ ಸ್ನಾನಘಟ್ಟದ ಬಳಿ ಪುಣ್ಯಸ್ನಾನ ಮಾಡಿ ಬಟ್ಟೆಗಳನ್ನು ನದಿಯಲ್ಲೇ ಬೀಸಾಕಿ ಹೋಗ್ತಾರೆ. ಇದ್ರಿಂದ ನದಿಯ ವಾತಾವರಣ ಕೆಡೋದ್ರಿಂದ ಬಂದಂತಹ ಪ್ರವಾಸಿಗರಿಗೆ ಇರಿಸು ಮುರಿಸು ಆಗ್ತಿತ್ತು.
ಇದನ್ನ ಗಮನಿಸಿದ ವಿದೇಶಿ ಪ್ರವಾಸಿಗರು ನದಿಯಲ್ಲಿನ ರಾಶಿ, ರಾಶಿ ತ್ಯಾಜ್ಯವನ್ನ ಹೊರ ತೆಗೆದು ಗಮನ ಸೆಳೆದಿದ್ದಾರೆ. ವಿದೇಶದಿಂದ ಬಂದ ಪ್ರವಾಸಿಗರು ಸ್ನಾನಘಟ್ಟವನ್ನ ಸ್ವಚ್ಚ ಮಾಡ್ತಿದ್ದಾರೆ. ವಿದೇಶಿ ಪ್ರವಾಸಿಗರು ಸ್ನಾನಘಟ್ಟ ಸ್ವಚ್ಚತೆ ಮಾಡೋದಾದ್ರೆ ಸಂಬಂಧಪಟ್ಟ ಅಧಿಕಾರಿ ವರ್ಗ ಏನ್ ಕೆಲಸ ಮಾಡ್ತಿದೆ ಅಂತ ಜನ ಪ್ರಶ್ನಿಸುವಂತಾಗಿದೆ.
PublicNext
04/02/2025 06:40 pm