ವಿಜಯನಗರ : ಗ್ರಾಮಕ್ಕೆ ಸಪ್ಲೈ ಆಗ್ತಿರೋ ಕುಡಿಯೋ ನೀರಿನ ಪೈಪ್ ಲೈನ್ ಒಡೆದು ಚರಂಡಿ ನೀರು ಮಿಕ್ಸ್ ಆಗಿ ಗ್ರಾಮದ ಮನೆ, ಮನೆಗೆ ತಲುಪುತ್ತಿರೋ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಡೆಲಡುಕು ಗ್ರಾಮದಲ್ಲಿ ನಡೆದಿದೆ.
ಬಡೆಲಡುಕು ಗ್ರಾಮದಲ್ಲಿ ಸರಿಸುಮಾರು ನಾಲ್ಕರಿಂದ ಐದು ಸಾವಿರ ಜನಸಂಖ್ಯೆ ಇದೆ. ಆದ್ರೆ ಗ್ರಾಮಕ್ಕೆ ಸಪ್ಲೈ ಆಗುತ್ತಿರೋ ಕುಡಿಯೋ ನೀರಿನ ಪೈಲ್ ಲೈನ್ ಒಡೆದು ತಿಂಗಳುಗಳೇ ಕಳೆದಿವೆ. ಆದ್ರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕುಡಿಯೋ ನೀರಿನ ಜೊತೆಗೆ ಚರಂಡಿ ನೀರು ಮಿಕ್ಸ್ ಆಗೋದನ್ನ ತಪ್ಪಿಸುವ ಯಾವುದೇ ಗೋಜಿಗೆ ಹೋಗಿಲ್ಲ.
ಬಡೆಲಡುಕು ಗ್ರಾಮಕ್ಕೆ ಸಪ್ಲೈ ಆಗ್ತಿರೋ ಪೈಪ್ ಲೈನ್ ಒಡೆದು ಇಡೀ ಗ್ರಾಮದಲ್ಲಿ ಅಲ್ಲಲ್ಲಿ ನೀರು ನಿಂತುಕೊಳ್ಳುತ್ತಿದೆ. ಇದರಿಂದ ಡೇಂಗ್ಯು, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಕೂಡಾ ನಿರ್ಮಾಣ ಆಗಿದೆ. ಈ ಬಗ್ಗೆ ಕೂಡ್ಲಿಗಿ ಶಾಸಕ ಶ್ರೀನಿವಾಸ್, ಪಿಡಿಓ ವಸಂತ್ ನಾಯ್ಕ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಸತೀಶ್ ಅವರಿಗೆ ಕಲವಾರು ಬಾರಿ ಮನವಿ ಮಾಸಿದ್ರೂ ನಮಗೂ ಅದಕ್ಕೂ ಸಂಬಂಧ ಇಲ್ಲ ಅನ್ನೋ ರೀತಿ ವರ್ತನೆ ಮಾಡ್ತಿದ್ದಾರಂತೆ. ಇನ್ನೂ ಗ್ರಾಮಕ್ಕೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಜಲಜೀವನ್ ಯೋಜನೆ ಅಡಿ ಬಡೆಲಡುಕು ಗ್ರಾಮಕ್ಕೆ ಕುಡಿಯೋ ಸಪ್ಲೈ ಮಾಡಲಾಗ್ತಿದೆ.
ಜಲಜೀವನ್ ಯೋಜನೆಯ ಕಾಮಗಾರಿಯನ್ನ ಬೇಕಾಬಿಟ್ಟಿ ಅರ್ಧಂಬರ್ಧ ಮಾಡಿದ್ರಿಂದ ಗ್ರಾಮದಲ್ಲಿ ಇಷ್ಟೊಂದು ಸಮಸ್ಯೆ ಉಲ್ಬಣಿಸಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಅನಾಹುತ ಆಗೋದಕ್ಕಿಂತ ಮೊದಲೇ ಎಚ್ಚೆತ್ತುಕೊಂಡು ಸರಿಪಡಿಸಬೇಕು ಅಂತ ಹೆಸರು ಹೇಳಲು ಇಚ್ಚಿಸದ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
Kshetra Samachara
06/01/2025 12:45 pm