ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು SDA ನೌಕರ ಸಾವಿಗೆ ಶರಣು…!

ಹೊಸಪೇಟೆ : ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದು ಮಂಜುನಾಥ ಅನ್ನೋ ಹೊಸಪೇಟೆ ನಗರಸಭೆ‌ಯ SDA ನೌಕರ‌ನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪೂರ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ SDA ನೌಕರ ಅಂತ ಗುರುತಿಸಲಾಗಿದೆ. ಹೊಸಪೇಟೆ ನಗರಸಭೆಯ ಪೌರಾಯುಕ್ತ ಸಿ.ಚಂದ್ರಪ್ಪ, ಆರ್.ಒ. ನಾಗರಾಜ ನನಗೆ ಮಾನಸಿಕ ಹಿಂಸೆ ನೀಡೋದ್ರ ಜೊತೆಗೆ ನನ್ನ ಮೇಲೆ ಅಧಿಕ ಕೆಲಸದ ಒತ್ತಡ ಹಾಗೂ ಕಿರುಕುಳ ನೀಡಿದ್ದಾರೆ. ಈ ರೀತಿ ನನಗ್ಯಾಕೆ ಕಿರುಕುಳ ನೀಡ್ತಿದ್ದಿರಿ. ಈ ರೀತಿ ಒತ್ತಡ ಹಾಕಬೇಡಿ ಅಂತ ಮೃತ ಮಂಜುನಾಥ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರಂತೆ. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮುಖ್ಯಾಧಿಕಾರಿ ಚಂದ್ರಪ್ಪ, ಆರ್.ಓ ನಾಗರಾಜ್, ಪದೇ, ಪದೇ ಇಲ್ಲಸಲ್ಲದ ಆರೋಪ ಹೊರೆಸಿ ಒತ್ತಡ ಹಾಕ್ತಿದ್ರಂತೆ. ಇದ್ರಿಂದ ಡೆತ್ ನೋಟ್ ಬರೆದಿಟ್ಟು ನೌಕರ ಮಂಜುನಾಥ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮಗನ ಆತ್ಮಹತ್ಯೆ ಸುದ್ದಿ ಕೇಳಿ ಮೃತ ಮಂಜುನಾಥ್ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಜೊತೆಗೆ ನನ್ನ ಮಗನ ಸಾವಿಗೆ ಕಾರಣರಾದ ಮುಖ್ಯಾಧಿಕಾರಿ ಚಂದ್ರಪ್ಪ, ಆರ್.ಓ ನಾಗರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಮೃತನ ತಾಯಿ ಗೌರಮ್ಮ ಹಂಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತನ ತಾಯಿ ದೂರಿನ ಮೇರೆಗೆ ಪೌರಾಯುಕ್ತ ಚಂದ್ರಪ್ಪ, RO ನಾಗರಾಜ್ ವಿರುದ್ಧ FIR ದಾಖಲಾಗಿದೆ.

Edited By : Suman K
PublicNext

PublicNext

10/01/2025 03:31 pm

Cinque Terre

26.75 K

Cinque Terre

0

ಸಂಬಂಧಿತ ಸುದ್ದಿ