ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್- ಜಾನುವಾರು ಕಳ್ಳರು ಖಾಕಿ ಬಲೆಗೆ

ಹಡಗಲಿ: ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ರಾತ್ರಿ ಮನೆಯ ಮುಂಭಾಗ ಮತ್ತು ತೋಟದಲ್ಲಿ ಕಟ್ಟಿಹಾಕಿದ್ದ ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಎರಡೇ ದಿನಕ್ಕೆ ಬಿಗ್ ಇಂಪ್ಯಾಕ್ಟ್ ಆಗಿದೆ.

ಹಡಗಲಿ ಪಟ್ಟಣದ 18ನೇ ವಾರ್ಡ್ ನಿವಾಸಿ ಚಾಪೇರ್ ಮಹಮದ್ ಸಲೀಂ ಎಂಬಾತನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಬಂಧಿತನಿಂದ 2 ಲಕ್ಷ 5 ಸಾವಿರ ನಗದು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಹಡಗಲಿ ಪಟ್ಟಣದ ರಾಜವಾಳ, ಹೊನ್ನೋರು ರಸ್ತೆಯಲ್ಲಿನ ಗುಡದಪ್ಪ ಎಂಬವರ 2 ಎತ್ತು, ಒಂದು ಹಸು, ಒಂದು ಕರುವನ್ನು ತೋಟದಲ್ಲಿ ಕಟ್ಟಿ ಹಾಕಲಾಗಿತ್ತು. ಜತೆಗೆ ಪಕ್ಕದ ಕೋಡಿಹಳ್ಳಿಯವರ ಓಣಿಯ ರಾಮಪ್ಪರ ಒಂದು ಹಸು ಕಳವಾಗಿತ್ತು. ಅಲ್ಲದೆ, ಅದೇ ಸ್ಥಳದಲ್ಲಿ ಕಟ್ಟಿ ಹಾಕಿದ್ದ ಪರಸಪ್ಪರ ಹಸು 15 ದಿನದ ಹಿಂದೆ ಕಳ್ಳತನವಾಗಿತ್ತು.

ಮುಂಜಾವ ಕಳ್ಳರು ವಾಹನದಲ್ಲಿ ಹಸು, ಕರುವನ್ನು ಒಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಿಸಿ ಟಿವಿ ಆಧರಿಸಿ ಕಳ್ಳರಿಗೆ ಬಲೆ ಬೀಸಿದ್ದ ಹಡಗಲಿ ಪೊಲೀಸರು ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರವಾದ ಎರಡೇ ದಿನಕ್ಕೆ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ.

Edited By : Shivu K
PublicNext

PublicNext

07/01/2025 09:01 am

Cinque Terre

31.25 K

Cinque Terre

0

ಸಂಬಂಧಿತ ಸುದ್ದಿ