ವಿಜಯನಗರ: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಪುತ್ರ, ನಟಿ ರಚಿತಾರಾಮ್ ನಟನೆಯ ಕಲ್ಟ್ ಚಿತ್ರತಂಡ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ತಿದೆ.
ಮೂರ್ನಾಲ್ಕು ದಿನಗಳ ಹಿಂದೆ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿ ಯಡವಟ್ಟು ಮಾಡ್ಕೊಂಡಿದ್ದ ಚಿತ್ರತಂಡ ಹೊಗೆ ಸೂಸುವ ವಾಹನ ನಿಷೇಧ ಸ್ಥಳದಲ್ಲಿ ನಿಯಮ ಮೀರಿ ವಾಹನಗಳ ಬಳಕೆ ಮಾಡಿ ಯಡವಟ್ಟು ಮಾಡ್ಕೊಂಡಿದೆ. ವಿಜಯ ವಿಠ್ಠಲ ದೇಗುಲಕ್ಕೆ ಬ್ಯಾಟರಿ ಚಾಲಿತ ವಾಹನಗಳಿಗಷ್ಟೆ ಪರವಾನಿಗೆ ಇದೆ.
ಜೊತೆಗೆ ಸ್ಮಾರಕಗಳಿಗೆ ಧಕ್ಕೆಯಾಗುತ್ತದೆ ಅಂತ ಪೆಟ್ರೋಲ್ - ಡಿಸೇಲ್ ವಾಹನಗಳ ಓಡಾಟಕ್ಕೆ ನಿಷೇಧ ಹೆರಲಾಗಿದೆ.
ಚಿತ್ರೀಕರಣದ ಓಡಾಟಕ್ಕೆ ಅಂತ ಕೇವಲ ಎರಡು - ಮೂರು ವಾಹನ ಓಡಾಟಕ್ಕೆ ಪರವಾನಿಗೆ ಪಡೆದು ಹತ್ತಾರು ವಾಹನಗಳನ್ನ ಓಡಾಟಕ್ಕೆ ಬಳಕೆ ಮಾಡಿದೆ. ವಿಶ್ವ ಪಾರಂಪರಿಕ ಸಂರಕ್ಷಿತ ಪ್ರದೇಶದಲ್ಲಿ ಗ್ಯಾಸ್ ಬಳಕೆಗೆ ಅವಕಾಶವಿಲ್ಲ. ನಿಯಮಬಾಹಿರ ಗ್ಯಾಸ್, ಸಿಲಿಂಡರ್ ಬಳಕೆ ಮಾಡಿ ಈ ನಿಯಮವನ್ನೂ ಚಿತ್ರತಂಡ ಬ್ರೇಕ್ ಮಾಡಿದೆ. ನಿಷೇಧಿತ ವಸ್ತುಗಳನ್ನ ಬಳಕೆ ಮಾಡ್ತಿರೋದನ್ನ ಗಮನಿಸಿ ಚಿತ್ರೀಕರಿಸಲು ಕ್ಯಾಮೆರಗಳನ್ನ ಆನ್ ಮಾಡ್ತಿದ್ದಂತೆ ಗ್ಯಾಸ್ ಗಳನ್ನು ಚಿತ್ರತಂಡ ಮುಚ್ಚಿಡಲು ಯತ್ನಿಸಿದೆ.
ಕಳೆದೊಂದು ವಾರದಿಂದ ಹಂಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಟ್ ಚಿತ್ರತಂಡ ಶೂಟಿಂಗ್ ನಡೆಸ್ತಿದೆ. ಪಾರಂಪರಿಕ ಪಟ್ಟಿಯಲ್ಲಿರೋ ಸ್ಥಳಗಳಲ್ಲಿ ನಿಯಮ ಮೀರಿದ ಚಿತ್ರತಂಡದ ವಿರುದ್ಧ ಸಂಬಂಧಿಸಿದ ಇಲಾಖೆಗಳು ಯಾವ ಕ್ರಮ ಕೈಗೊಳ್ತವೆ ಅನ್ನೋದನ್ನ ಕಾದು ನೋಡಬೇಕಿದೆ.
PublicNext
04/02/2025 06:17 pm