", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/378325-1738669341-8.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕೊಟ್ಟೂರು : ಐತಿಹಾಸಿಕ ಕೊಟ್ಟೂರು ರಥೋತ್ಸವ ಪ್ರಯುಕ್ತ ತೇರುಗಡ್ಡಿಯನ್ನ ಹೊರಹಾಕುವ ವೇಳೆ ರಥದ ಗಡ್ಡಿ ಚಾನಲಾ ಜಾಗವನ್ನ ಬಿಟ್ಟು ಅತಿವೇಗದಿಂದ ಚಾಲನ...Read more" } ", "keywords": "Kottur, Temple Chariot, Ratha Festival, Narrow Escape, Accident Averted, Karnataka News, Temple Festival, Chariot Procession, Hindu Rituals.,Vijayanagara,Accident", "url": "https://publicnext.com/article/nid/Vijayanagara/Accident" }
ಕೊಟ್ಟೂರು : ಐತಿಹಾಸಿಕ ಕೊಟ್ಟೂರು ರಥೋತ್ಸವ ಪ್ರಯುಕ್ತ ತೇರುಗಡ್ಡಿಯನ್ನ ಹೊರಹಾಕುವ ವೇಳೆ ರಥದ ಗಡ್ಡಿ ಚಾನಲಾ ಜಾಗವನ್ನ ಬಿಟ್ಟು ಅತಿವೇಗದಿಂದ ಚಾಲನೆ ಮಾಡಿದ್ರಿಂದ ಅನಾಹುತವೊಂದು ನಡೆದಿದ್ದು, ಬೈಕ್ ಸವಾರನೋರ್ವ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ನಡೆದಿದೆ.
ವರ್ಷಾನುಗಟ್ಟಲೆ ರಥದ ಗಡ್ಡೆಯನ್ನ ನಿಂತಲ್ಲೇ ನಿಲ್ಲಿಸಿದ್ರಿಂದ ಜೇನುನೊಣಗಳು ಗೂಡು ಕಟ್ಟಿವೆ. ರಥದಲ್ಲಿ ಇದ್ದ ಜೇನು ಗೂಡನ್ನ ತೆರವುಗೊಳಿಸಲು ಅಗ್ನಿಶಾಮಕದ ಸಿಬ್ಬಂದಿ ಜೇನು ಗೂಡಿಗೆ ನೀರು ಬಿಟ್ಟಿದ್ರಿಂದ ರಥದ ಒಳಗಡೆ ಇದ್ದ ಜನರೇಟರ್ ಕೈಕೊಟ್ಟು ಹ್ಯಾಂಡಲ್ ಲಾಕ್ ಆಗಿದೆ. ಅದನ್ನ ಗಮನಿಸದೇ ರಥ ನಿರ್ವಹಣಾ ಸಿಬಂದಿ ಹೊರಗೆ ತಂದಿದ್ದಾರೆ. ಅಷ್ಟೇ ಅಲ್ಲದೇ ಹೊರಗೆ ರಥವನ್ನ ಎಳೆಯುವ ವೇಳೆ ನೆರೆದಿದ್ದ ಭಕ್ತರು ಜೋರಾಗಿ ಎಳೆದಿದ್ರಿಂದ ಹ್ಯಾಂಡಲ್ ಲಾಕ್ ಆಗಿದ್ರಿಂದ ಕಂಟ್ರೋಲ್ ಗೆ ಬಾರದೇ ರಸ್ತೆ ಪಕ್ಕದಲ್ಲಿದ್ದ ವಾಹನಗಳ ಮೇಲೆ ರಥ ಹತ್ತಿದೆ.
ರಥ ವಾಹನಗಳ ಮೇಲೆ ಹತ್ತುವ ವೇಳೆ ಬೈಕ್ ಮೇಲೆ ನಿಂತಿದ್ದ ಸವಾನೋರ್ವ ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ.
ಈ ವೇಳೆ ರಥ ವೇಗಾವಿ ಚಾಲನೆ ವೇಳೆ ರಥದ ಚಕ್ರಕ್ಕೆ ಅಡ್ಡಕೋಲು ಹಾಕಿ ರಥದ ಚಾಲನೆಯನ್ನ ನಿರ್ವಹಣಾ ಸಿಬ್ಬಂದಿ ನಿಯಂತ್ರಣಕ್ಕೆ ತಂದಿದ್ದಾರೆ. ಇದ್ರಿಂದ ನಡೆಯಬೇಕಿದ್ದ ಭಾರಿ ಅವಗಡ ತಪ್ಪಿದಂತಾಗಿದೆ.
PublicNext
04/02/2025 05:33 pm