ಕಾರವಾರ : ಕುಮಟಾದ ಹೆಸ್ಕಾಂ ಉಪವಿಭಾಗದ 33/11 ಕೆ.ವಿ ಗೋಕರ್ಣ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವದರಿಂದ ಅ.30 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಗೋಕರ್ಣ ವ್ಯಾಪ್ತಿಯ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರು, ಗಂಗಾವಳಿ, ಓಂ ಬಿಚ್ ಫೀಡರಿನ ಎಲ್ಲಾ ಭಾಗಗಳಲ್ಲ್ಲಿ, 33/11 ಕೆ.ವಿ ಮರಾಕಲ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಉಳ್ಳೂರುಮಠ, ಹೊದ್ಕೆ ಶಿರೂರು ಹಾಗೂ ಮೂರುರು ಫೀಡರಿನ ವ್ಯಾಪ್ತಿಯಲ್ಲಿ ಹಾಗೂ ನಗರ ಶಾಖೆಯ ಫೀಡರಗಳಾದ ಕುಮಟಾ ನಗರ, ಭಾಗಗಳಲ್ಲಿ ಮತ್ತು ಗ್ರಾಮಿಣ ಶಾಖೆಯ ಧಾರೇಶ್ವರ ಫೀಡರಿನ ಭಾಗದಲ್ಲಿ ಜಂಗಲ್ ಕಟ್ಟಿಂಗ್ ಇರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ. ಈ ವೇಳೆ ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
28/10/2024 08:01 pm