ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್‌ ವತಿಯಿಂದ ಕ್ರಿಕೆಟ್ ಪಂದ್ಯಾವಳಿ

ಶಿರಸಿ: ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಶಿರಸಿ ಫೋಟೋಗ್ರಾಫರ್ಸ್ & ವಿಡಿಯೋಗ್ರಾಫರ್ಸ್ ಅಸೋಸಿಯೇಷನ್‌ ಸಹಯೋಗದಲ್ಲಿ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಉದ್ಘಾಟನೆ ಸಮಾಜ ಸೇವಕ ಮತ್ತು ಸಾರಿಕಾ ಸೇವಾ ಟ್ರಸ್ಟ್ ಅಧ್ಯಕ್ಷ ಫಯ್ಯು ಚೌಟಿ ಪಂದ್ಯಾವಳಿ ಉದ್ಘಾಟಿಸಿದರು.

ವೇದಿಕೆ ಮೇಲೆ ಫಯ್ಯು ಚೌಟಿ ಮತ್ತು ಸಂತೋಷ್ ಶೆಟ್ಟಿ ಅವರನ್ನು ಅಸೋಸಿಯೇಷನ್ ಬಳಗದ ವತಿಯಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂತೋಷ ಕೆ ಶೆಟ್ಟಿ, ನವೀನ್ ಗಾಂವ್ಕರ್, ದೀಪಾ ಮಹಾಲಿಂಗಣ್ಣನವರ್, ಲಕ್ಷ್ಮಿ ನಾರಾಯಣ ಭಟ್, ಸುರೇಶ್ ಹೊನ್ನಾವರ, ರಾಜು ಕಾನಸುರ, ಪರಶುರಾಮ ಪಾವದ್ , ಚನ್ನವೀರ ಸಿ.ಗಾಣಿಗೇರ್, ಅಮಿತ ಜಯವಂತ್, ಸಂತೋಷ ಶಿರ್ಶಿಕರ, ಜಗದೀಶ ಜಯವಂತ , ದೀರಜ್ ಗಂಗೊಳ್ಳಿ ಮುಂತಾದವರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

11/01/2025 04:40 pm

Cinque Terre

7.48 K

Cinque Terre

0