ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಕುದಿಯುತ್ತಿರುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆದ ಭಕ್ತರು!

ಕಾರವಾರ (ಉತ್ತರಕನ್ನಡ): ಭೂಮಿ ಹುಣ್ಣಿಮೆಯ ದಿನ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಶಾಂತೇರಿ ಕಾಮಾಕ್ಷಿ ದೇವಾಲಯದಲ್ಲಿ ವಿಶಿಷ್ಟವಾಗಿ ವಡೆ ಸೇವೆ ನೆರವೇರಿತು. ಕುದಿಯುತ್ತಿರುವ ಎಣ್ಣೆಯಿಂದ ಖಾಲಿ ಕೈನಲ್ಲಿ ಭಕ್ತರು ವಡೆ ತೆಗೆದು ಭಕ್ತಿ ಪರಾಕಾಷ್ಠೆ ಮೆರೆದರು.

ಮೂಲತಃ ಗುವಾಹಟಿಯ ಕಾಮಾಕ್ಷಿ ದೇವರು ಕುಮಟಾಕ್ಕೆ ಬಂದು ನೆಲೆಸಿದ ನಂತರ ಪ್ರತಿ ವರ್ಷ ದೇವಸ್ಥಾನದಲ್ಲಿ 15 ದಿನಗಳ ಕಾಲ ಉತ್ಸವ ನಡೆಸಲಾಗುತ್ತಿದೆ. ಹದಿನೈದನೇ ದಿನ ಭೂಮಿ ಹುಣ್ಣಿಮೆಯಂದು ಈ ಉತ್ಸವ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಈ ವಡೆ ಸೇವೆ ಹಮ್ಮಿಕೊಳ್ಳಲಾಗುತ್ತದೆ. ತಮ್ಮ ಒಳಿತಿಗಾಗಿ ಹರಕೆ ಕಟ್ಟಿಕೊಳ್ಳುವ ಭಕ್ತರು ಕಾದ ಬಾಣಲಿಯಲ್ಲಿ ವಡೆ ತೆಗೆಯುವ ಮೂಲಕ ಹರಕೆ ತೀರಿಸುತ್ತಾರೆ. ಇದು ನೋಡುಗರ ಮೈ ರೋಮಾಂಚನಗೊಳಿಸುತ್ತದೆ.

ನೂರಾರು ವರ್ಷಗಳ ಇತಿಹಾಸವಿರುವ ಈ ಆಚರಣೆ ಇಲ್ಲಿ ಪ್ರಸಿದ್ಧಿ ಪಡೆದಿದೆ. ಕುಮಟಾ ಪಟ್ಟಣದ ಗುಜರಗಲ್ಲಿಯಲ್ಲಿರುವ ಕಾಮಾಕ್ಷಿ ದೇವಿ ಜಾತ್ರೆಗೆ ಕೇವಲ ರಾಜ್ಯದಿಂದ ಅಲ್ಲದೇ ಗೋವಾ, ಮಹಾರಾಷ್ಟ್ರ, ಮುಂಬೈಯಿಂದಲೂ ಸಹ ಭಕ್ತರ ದಂಡು ಆಗಮಿಸುತ್ತದೆ. ಜಾತ್ರೆ ಸಮಯದಲ್ಲಿ ಕುದಿಯುತ್ತಿರುವ ಎಣ್ಣೆಯಲ್ಲಿ ವಡೆ ತೆಗೆಯುತ್ತೇನೆ ಎಂದು ಹರಕೆ ಹೊತ್ತಿಕೊಂಡ್ರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬುದು ಇಲ್ಲಿಗೆ ಆಗಮಿಸುವ ಭಕ್ತರ ನಂಬಿಕೆಯಾಗಿದೆ.

Edited By : Shivu K
PublicNext

PublicNext

10/10/2022 10:21 am

Cinque Terre

40.21 K

Cinque Terre

0