ರಾತ್ರಿ ಹಾಲ್ಟಿಂಗ್ ಬಸ್ ಸೌಲಭ್ಯ ಕೋರಿ ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಕಾರವಾರದ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಕಾರವಾರ ನಗರದಿಂದ ಬೇಳೂರು ಮಾರ್ಗಕ್ಕೆ ರಾತ್ರಿ 7.30ರ ಸಮಯಕ್ಕೆ ಒಂದು ಹೆಚ್ಚುವರಿ ಬಸ್ ಬಿಡಬೇಕು. ಈ ಮಾರ್ಗದಲ್ಲಿ ಕಿನ್ನರ, ಬೋರಿಭಾಗ, ಸಿದ್ದರ, ಖಾರ್ಗೇಜೂಗ್, ಉಬಳೇಜೂಗ್, ವೈಲವಾಡಾ, ಖಾರ್ಗಾ, ಬರಗಲ್ ಗ್ರಾಮಗಳು ಬರುವುದರಿಂದ ಗ್ರಾಮೀಣ ಭಾಗಕ್ಕೆ ವಾಪಸ್ಸಾಗುವವರ ಸಂಖ್ಯೆ ಹೆಚ್ಚಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 15 ದಿನದಲ್ಲಿ ಬಸ್ ಬಿಡದಿದ್ದರೆ ಕಾರವಾರದ ಡಿಪೋ ಎದುರು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Kshetra Samachara
20/09/2022 07:34 pm