ಕಾರವಾರ (ಉತ್ತರಕನ್ನಡ): ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಯಾವುದೇ ಉತ್ತಮ ಸಂದೇಶ ಕೊಡುವ ಯಾವುದೇ ಸಂಸ್ಥೆಗಳಿದ್ದರೂ ಅನುಮತಿ ಕೊಡುತ್ತೇವೆ. ನಿಷೇಧಿತ ಯಾವುದೇ ಸಂಸ್ಥೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ವಸತಿ ಶಾಲೆಯಲ್ಲಿ ಆರ್ ಎಸ್ ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ವಿರೋಧ ವ್ಯಕ್ತವಾಗಿರುವ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು, ದಸರಾ ರಜೆ ಸಮಯದಲ್ಲಿ ರಾಜ್ಯದ ಎಲ್ಲ ಶಾಲೆಗಳಿಗೆ ರಜೆ ಕೊಡುತ್ತೇವೆ. ರಜೆ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ನಡೆಸಲು ಎನ್ಎಸ್ಎಸ್ ನಂತೆ ಅನೇಕ ಸಂಘ- ಸಂಸ್ಥೆಗಳು ಕೂಡ ಅನುಮತಿ ಕೇಳುತ್ತವೆ. ದೇಶ ಮೊದಲು ಎನ್ನುವ ಯಾವುದೇ ಸಂಸ್ಥೆಗೆ ಅವಕಾಶ ಕೊಡುತ್ತೇವೆ, ಇದು ಮೊದಲಿನಿಂದಲೂ ವಾಡಿಕೆ ಎಂದರು.
ಆರ್ ಎಸ್ ಎಸ್ ಶಿಬಿರ ನಡೆಸಲು ನಾವು ಶಾಲೆಗಳನ್ನು ಕೊಟ್ಟಿಲ್ಲ. ಹೀಗಾಗಿ ಅದು ತಪ್ಪೋ, ಸರಿಯೋ ಅನ್ನೊ ಪ್ರಶ್ನೆಯೇ ಬರುವುದಿಲ್ಲ. ಟೀಕೆ ಮಾಡುವವರು ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಟೀಕೆ ಮಾಡಲಿ ಎಂದಿದ್ದಾರೆ.
PublicNext
11/10/2022 01:42 pm