ಕಾರವಾರ (ಉತ್ತರಕನ್ನಡ): ಜಾರಿಗೆ ತಂದ ಯೋಜನೆಗಳು ಹಾಗೂ ಜನಸೇವೆಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬೇಕೆ ಹೊರತು ಅಮಾಯಕರ ಸಾವನ್ನು ಕೋಮುಗಲಭೆಯಾಗಿ ಪರಿವರ್ತಿಸಿ ರಾಜಕಾರಣ ಮಾಡಬಾರದು ಎಂದು ಕಾರವಾರ- ಅಂಕೋಲಾ ಕ್ಷೇತ್ರದ ಮಾಜಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಮೃತ ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ನೀಡಿದ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಅವರು, ಸಹಜ ಸಾವನ್ನು ಕೋಮು ಗಲಭೆಯಾಗಿ ಪರಿವರ್ತಿಸಿ 2018ರ ಚುನಾವಣೆಯನ್ನು ಬಿಜೆಪಿಗರು ಗೆದ್ದಿದ್ದಾರೆ. ಆದರೆ ಈಗ ಜಿಲ್ಲೆಯ ಜನರಿಗೆ ಸತ್ಯ ತಿಳಿದಿದೆ. ಈ ಸತ್ಯಾಂಶದಿಂದ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಯಲಿದೆ ಎಂದಿದ್ದಾರೆ.
PublicNext
04/10/2022 12:19 pm