ಕಾರವಾರ ಮೆಡಿಕಲ್ ಕಾಲೇಜು ಕಲಿಯುಗದ ಪ್ರಯೋಗಶಾಲೆ. ಕಿಮ್ಸ್ ನಲ್ಲಿನ ನಿಯಮಗಳೆಲ್ಲ ನಮಗೆ ಹೊಸದು, ಅದನ್ನ ನಾವೀಗ ಕಲಿತುಕೊಳ್ಳಬೇಕಾಗಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ವ್ಯಂಗ್ಯ ವಾಡಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು, ಆರ್ಎಂಒ ಹುದ್ದೆಗೆ ಮಧ್ಯದಲ್ಲಿ ಕತ್ತರಿ ಹೊಡೆದು ಎರಡು ಆರ್ಎಂಒ ಹುದ್ದೆ ಸೃಷ್ಟಿಸಿದ್ದಾರೆ. ಒಂದು ಭಟ್ ಅಂತೆ, ಇನ್ನೊಂದು ವೆಂಕಟೇಶ್ ಅಂತೆ. ವೆಂಕಟೇಶನನ್ನ ಆಸ್ಪತ್ರೆಯ ಮುಂಭಾಗದಲ್ಲಿ ಗಣೇಶನೊಟ್ಟಿಗೆ ಕೂರಿಸಲಾಗಿದೆ. ಪೂಜೆ ಮಾಡೋ ಭಟ್ಟರಿಗೆ ಒಳಗೆ ಕೂರಿಸಿದ್ದಾರೆ ಎಂದಿದ್ದಾರೆ.
ಮತ್ಯಾವಾಗ ಎರ್ಡು ಡೈರೆಕ್ಟರ್, ಎರ್ಡು ಡಿಎಚ್ಒ, ಎರ್ಡು ಸರ್ಜನ್ ಆಗ್ತಾರೋ ಗೊತ್ತಿಲ್ಲ. ಒಟ್ಟಾರೆ ಆ ಜಾಗ ಬಿಡುವುದಿಲ್ಲ, ನಾವು ಹಠವಾದಿಗಳು, ಬೇಕಿದ್ದರೆ ಎರಡು ಎಂ.ಎಲ್‌ಎ ಆಗಲಿ ಎಂದಿದ್ದಾರೆ.
PublicNext
01/10/2022 08:27 pm