ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪರಿಸರವಾದಿಗಳು ಜನರ ಮುಂದೆ ಬರ್ಬೇಕು; ಎಸಿ ರೂಮಲ್ಲಿ ಕೂತು ಪರಿಸರ ಕಾಳಜಿ ತೋರೋದಲ್ಲ; ಶಿವರಾಂ ಹೆಬ್ಬಾರ್

ಪರಿಸರವಾದಿಗಳು ಉತ್ತರಕನ್ನಡ ಜನರ ಮಧ್ಯೆ ಬಂದು ಅವರ ಪರಿಸರ ಕಾಳಜಿ ತೋರಿಸಬೇಕೆ ವಿನಾ, ಎಸಿ ರೂಮಲ್ಲಿ ಗುಜರಾತ್, ಮುಂಬೈ, ಬೆಂಗಳೂರಿನಲ್ಲಿ ಕುಳಿತು ಮಾತನಾಡುವುದಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅಂಕೋಲಾ- ಹುಬ್ಬಳ್ಳಿ ರೈಲು ಯೋಜನೆಗೆ ಅಡ್ಡಿಪಡಿಸುತ್ತಿರುವ ಪರಿಸರವಾದಿಗಳ ವಿರುದ್ಧ ಕಿಡಿಕಾರಿದ್ದಾರೆ.

ಕಾರವಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಂಕೋಲಾ- ಹುಬ್ಬಳ್ಳಿ ರೈಲ್ವೆಗಾಗಿ ಈ ಜಿಲ್ಲೆಯ ಜನ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಅಂಕೋಲಾ- ಹುಬ್ಬಳ್ಳಿ ರೈಲ್ವೆಯಿಂದ ಉತ್ತರ ಕರ್ನಾಟಕ ಮತ್ತು ಉತ್ತರಕನ್ನಡವನ್ನ ಜೋಡಿಸಬೇಕೆಂಬುದು ಸರ್ವರ ಮಹಾದಾಸೆ. ಅದರಿಂದಾಗಿ ಬಂದರು, ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಜಿಲ್ಲೆ ಅತ್ಯಂತ ವೇಗವಾಗಿ ಬೆಳೆಯಬೇಕಿದೆ. ಜಿಲ್ಲೆಯ ನಿರುದ್ಯೋಗಿ ಪದವೀಧರರು ಉದ್ಯೋಗವಂತರಾಗಬೇಕಿದೆ. ಅದಕ್ಕಾಗಿ ಈ ರೈಲ್ವೆ ಮಾರ್ಗ ಬೇಕಿದೆ ಎಂದರು.

ಈಗ ಅಂತಿಮ ಘಟ್ಟದಲ್ಲಿದ್ದೇವೆ. ನಾವೆಲ್ಲ ಪಕ್ಷಾತೀತವಾಗಿ ಸೇರಿ ಬಂದಿರುವ ಸಮಿತಿಗೆ ಮನವಿ ಮಾಡಿದ್ದೇವೆ ಎಂದ ಅವರು, ದೇಶಕ್ಕಾಗಿ ತ್ಯಾಗ ಮಾಡಿದ ಜಿಲ್ಲೆ ಇದು. ಈ ಜಿಲ್ಲೆಯ ಜನಕ್ಕಾಗಿ ನ್ಯಾಯ ಕೊಡಬೇಕಾಗಿರುವುದು ನಮ್ಮ ಕರ್ತವ್ಯ. ಈ‌ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡುತ್ತಿವೆ. ಇಡೀ ರಾಜ್ಯದಲ್ಲಿ ಉತ್ತರಕನ್ನಡ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಅದಕ್ಕಾಗಿ ಈ ರೈಲ್ವೆ ಮಾರ್ಗ ಅವಶ್ಯವಾಗಿದೆ ಎಂದರು.

Edited By :
PublicNext

PublicNext

28/09/2022 03:29 pm

Cinque Terre

25.01 K

Cinque Terre

0

ಸಂಬಂಧಿತ ಸುದ್ದಿ