ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಸೆ.21ಕ್ಕೆ ಬೆಂಗಳೂರಿನಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆ; ಹರಿಶ್ಚಂದ್ರ ನಾಯ್ಕ

ಕಾರವಾರ : ಕಲ್ಯಾಣ ಮಂಡಳಿ ಉಳಿಸಿ, ಕಾರ್ಮಿಕರನ್ನ ರಕ್ಷಿಸಿ ಘೋಷಣೆಯಡಿ ಸೆ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಾರ್ಮಿಕರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಪ್ರಾಂತ ಸಹಸಂಘಟನಾ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ ತಿಳಿಸಿದ್ದಾರೆ.

ಕಾರವಾರದಲ್ಲಿ 'ಪಬ್ಲಿಕ್ ನೆಕ್ಸ್ಟ್' ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಾರ್ಮಿಕರ ಸೌಲಭ್ಯಗಳು ಫಲಾನುಭವಿಗಳಿಗೆ ಬಹಳ ವಿಳಂಬವಾಗಿ ತಲುಪುತ್ತಿವೆ. ಹೀಗಾಗಿ ಈ ಯೋಜನೆಗಳನ್ನು ಸಕಾಲ ವ್ಯಾಪ್ತಿಗೆ ತರಬೇಕು. ಅಲ್ಲದೇ ಕೆಲ ಜನಪ್ರಿಯ ಯೋಜನೆಗಳ ಹೆಸರಿನಲ್ಲಿ ಮಂಡಳಿಯಲ್ಲಿನ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡಲಾಗುತ್ತಿದ್ದು, ಇಂಥ ಯೋಜನೆಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಡಳಿಯಲ್ಲಿರುವ ಹಣವನ್ನೆಲ್ಲ ಖರ್ಚು ಮಾಡಿಕೊಂಡರೆ ಮುಂದಿನ ಪೀಳಿಗೆಗೆ, ಕಾರ್ಮಿಕರ ಅವಲಂಬಿತರಿಗೆ ಸೌಲಭ್ಯ ನೀಡುವುದು ಹೇಗೆ ಎಂಬುವುದು ಅವರ ಪ್ರಶ್ನೆಯಾಗಿದೆ.

Edited By : Manjunath H D
Kshetra Samachara

Kshetra Samachara

16/09/2022 06:23 pm

Cinque Terre

5.54 K

Cinque Terre

0

ಸಂಬಂಧಿತ ಸುದ್ದಿ