ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ರಾಹುಲ್ ಗಾಂಧಿ ಸತ್ತ ಕುದುರೆ ಚಲಾಯಿಸುತ್ತಿದ್ದಾರೆ; ಬಿಜೆಪಿ ವಕ್ತಾರ

ಕಾರವಾರ (ಉತ್ತರ ಕನ್ನಡ): ಗಾಂಧೀಜಿ ಕಾಂಗ್ರೆಸ್‌ನವರ ಸ್ವತ್ತಲ್ಲ. ಕಾಂಗ್ರೆಸ್‌ನವರು ಅವರನ್ನ ಎಷ್ಟು ಕಾಪಿ ಮಾಡಿದರೆಂದರೆ ಅವರ ಸರ್‌ನೇಮ್ ಕೂಡ ಬಳಸಿಕೊಂಡರು. ಆದರೆ ಸಂಘ ಪರಿವಾರದ ಚಿಂತನೆಗಳಿಗೂ, ಗಾಂಧೀಜಿಯವರ ಚಿಂತನೆಗೂ ಬಹಳ ಸಾಮ್ಯತೆ ಇತ್ತು ಎಂದು ಬಿಜೆಪಿ ಉತ್ತರ ಕನ್ನಡ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದ್ದಾರೆ.

ಕಾರವಾರದಲ್ಲಿ ಮಾತನಾಡಿದ ಅವರು, ಎಲ್ಲಾ ಮಹಾತ್ಮರ ಚಿಂತನೆಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದಿಲ್ಲ. ಬಿಜೆಪಿ ಗಾಂಧೀಜಿಯವರಿಗೆ ಗೌರವ ನೀಡುತ್ತದೆ. ಅವರು ಹರಿಜನೋದ್ಧಾರಕ್ಕಾಗಿ, ಗ್ರಾಮೀಣಾಭಿವೃದ್ಧಿಗಾಗಿ ಮಾಡಿದ ಸೇವೆಯನ್ನ ಮರೆಯಲಾಗುವುದಿಲ್ಲ. ಗಾಂಧೀಜಿಯವರೇ ಹೇಳಿದ್ದರು, ಸ್ವಾತಂತ್ರö್ಯದ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದು. ಆದರೆ ಮಾಡಿಲ್ಲ ಎಂದರು.

ಕಾಂಗ್ರೆಸ್‌ನ ಭಾರತ್ ಜೋಡೋ ಅಭಿಯಾನದ ಕುರಿತು ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಸತ್ತ ಕುದುರೆಯನ್ನ ಚಲಾಯಿಸುತ್ತಿದ್ದಾರೆ. ಗಾಂಧೀಜಿ ಎನ್ನುವುದು ಈ ದೇಶದ ಸ್ವತ್ತು. ಅವರ ಸಚಿಂತನೆಗಳನ್ನು ನಾವೂ ಪಾಲಿಸುತ್ತೇವೆ. ಕಾಂಗ್ರೆಸ್‌ನಲ್ಲಿ ಯಾರಾದರೂ ಒಳ್ಳೆ ಕೆಲಸ ಮಾಡಿದರೆ ನಾವು ಕೂಡ ಅವರನ್ನು ಒಪ್ಪಿಕೊಳ್ಳುತ್ತೇವೆ. ಉದಾತ್ತ ಕೆಲಸಗಳನ್ನು ಮಾಡಿದ ಯಾವುದೇ ಪಕ್ಷದವರನ್ನು ಸ್ವಾಗತಿಸಬೇಕು ಎಂದರು.

Edited By : Manjunath H D
PublicNext

PublicNext

15/09/2022 07:46 pm

Cinque Terre

34.96 K

Cinque Terre

4

ಸಂಬಂಧಿತ ಸುದ್ದಿ