ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಬರುತ್ತೇನೆಂದು ಬಾರದ ಸಚಿವ; 130 ಕಿ.ಮೀ. ದೂರದ ಜಿಲ್ಲಾ‌ ಕೇಂದ್ರಕ್ಕೆ ಬಂದು ವಾಪಸ್ಸಾದ ಕುಗ್ರಾಮದ ಜನ

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರಿಂದ ಅಹವಾಲು ಸ್ವೀಕಾರದ ಮಾಹಿತಿ ಆಧರಿಸಿ ನೂರಾರು ಕಿ.ಮೀ ದೂರದ ಕುಗ್ರಾಮದಿಂದ ಸಚಿವರನ್ನು ಕಂಡು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಗ್ರಾಮಸ್ಥರಿಗೆ ಸಚಿವರು ಸಿಗದೆ ಪರದಾಡಿದ ಘಟನೆ ಕಾರವಾರದಲ್ಲಿ ಶುಕ್ರವಾರ ನಡೆದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಂದ ಶುಕ್ರವಾರ ಕಾರವಾರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿತ್ತು. ಅದರಂತೆ ಕುಮಟಾ ತಾಲ್ಲೂಕಿನ ಕುಗ್ರಾಮ ಮೇದಿನಿಯ ಜನರು ಮಾಹಿತಿ ಗಮನಿಸಿ ಒಟ್ಟಾಗಿ ಕಾರವಾರಕ್ಕೆ ತೆರಳಲು ನಿರ್ಧರಿಸಿದ್ದರು. ಬೆಳಿಗ್ಗೆ 5 ಗಂಟೆಗೆ ದಟ್ಟ ಅರಣ್ಯದಲ್ಲಿ ಕಾಲ್ನಡಿಗೆಯಲ್ಲಿ 8 ಕಿ.ಮೀ ನಡೆದು ಬಸ್ ಮೂಲಕ ಸುಮಾರು 20 ಕ್ಕೂ ಹೆಚ್ಚು ಜನರು ನೂರಾರು ಕಿ.ಮೀ ದೂರದ ಜಿಲ್ಲಾ ಕೇಂದ್ರ ಕಾರವಾರವನ್ನು ತಲುಪಿದ್ದರು. ಆದರೆ ಕಾರವಾರದಲ್ಲಿ ಸಚಿವರ ಕಾರ್ಯಕ್ರಮ ರದ್ದುಪಡಿಸಲಾಗಿತ್ತಾದರೂ ಈ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ಗ್ರಾಮಸ್ಥರು ಪರದಾಡುವಂತಾಯಿತು. ಸುಮಾರು 130 ಕಿ.ಮೀ ದೂರ ಪ್ರಯಾಣ ಬೆಳಸಿದರು ಸಚಿವರನ್ನು ಕಾಣಲಾಗದೆ ಕೊನೆಗೆ ಸಚಿವ ಕಚೇರಿಗೆ ತೆರಳಿ ಸಮಸ್ಯೆ ಬಗ್ಗೆ ವಿನಂತಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಗ್ರಾಮಕ್ಕೆ ಅಗತ್ಯವಿರುವ ರಸ್ತೆಗಾಗಿ ಮನವಿ ಮಾಡುತ್ತಿದ್ದೇವೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬರು ಜಿಲ್ಲಾಧಿಕಾರಿ ಕೂಡ ಗ್ರಾಮದಲ್ಲಿ ಗ್ರಾಮ‌ವಾಸ್ತವ್ಯ ಮಾಡಿ ಸಮಸ್ಯೆ ಅರಿತಿದ್ದಾರೆ. ಆದರೆ ದೊಡ್ಡ ಮಟ್ಟದ ಅನುದಾನ ಬೇಕಾಗಿರುವುದರಿಂದ ಪ್ರಯತ್ನಿಸುವುದಾಗಿ ತಿಳಿಸುತ್ತಿದ್ದಾರೆ. ಆದರೆ ಗ್ರಾಮಕ್ಕೆ 7 ಕಿ.ಮೀ ರಸ್ತೆ ಅವಶ್ಯಕತೆ. ಆದರೆ ಅನುದಾನ ದೊಡ್ಡಮಟ್ಟದಲ್ಲಿ ಬೇಕು ಎಂದು ಪ್ರತಿ ಬಾರಿಯೂ ನಮ್ಮ‌ ಮನವಿ ತಿರಸ್ಕರಿಸಲಾಗುತ್ತಿದೆ. ಆದರೆ ನಮಗೆ 7 ಕಿ.ಮಿ ಬದಲಾಗಿ ತುರ್ತಾಗಿ ಅಗತ್ಯವಿರುವ ಕೇವಲ 3 ಕಿ.ಮೀ ರಸ್ತೆ ನಿರ್ಮಾಣ ಮಾಡಿಕೊಡಬೇಕಾಗಿದೆ. ಈ ಬಗ್ಗೆ ಸಚಿವರ ಬಳಿ ಮನವಿ ಮಾಡಲು ಬಂದಿದ್ದು, ಸಚಿವರು ಸಿಕ್ಕಿಲ್ಲ.‌ ಅವರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ್ದು ಅಲ್ಲಿನ ಸಿಬ್ಬಂದಿ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

09/09/2022 10:45 pm

Cinque Terre

19.82 K

Cinque Terre

0

ಸಂಬಂಧಿತ ಸುದ್ದಿ