ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪಿಎಫ್ಐಯನ್ನ ಬೆಳೆಸಿದ್ದೇ ಕಾಂಗ್ರೆಸ್ ಸರ್ಕಾರ; ಕಮಲಾಕರ ಮೇಸ್ತಾ

ಕಾರವಾರ (ಉತ್ತರಕನ್ನಡ): ಪಿಎಫ್ಐ ಸಂಘಟನೆಯನ್ನ ಬ್ಯಾನ್ ಮಾಡಿರುವ ಸರ್ಕಾರದ ಕ್ರಮವನ್ನ ಸ್ವಾಗತಿಸಿರುವ ಮೃತ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ, ಪಿಎಫ್ಐ ಸಂಘಟನೆಯನ್ನ ಬೆಳೆಸಿದ್ದೇ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದ್ದಾರೆ.

ಪತ್ರಕರ್ತರೊಂದಿಗೆ ಹೊನ್ನಾವರದಲ್ಲಿ ಮಾತನಾಡಿರುವ ಅವರು, ಪಿಎಫ್ಐ ಬಹಳ ಬೆಳದುಬಿಟ್ಟಿತ್ತು. ಯಾವುದೇ ಹತ್ಯೆ ನಡೆದರೂ ಅದರಲ್ಲಿ ಅವರ ಪಾತ್ರವಿರುತ್ತಿತ್ತು. ನನ್ನ ಮಗನ ಹತ್ಯೆಯಲ್ಲೂ ಇವರ ಕೈವಾಡ ಇರಬಹುದು ಎಂಬ ಅನುಮಾನ ಈಗ ಬಂದಿದೆ ಎಂದು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಈ ಸಂಘಟನೆ ಬೆಳೆಯಲು ನೀಡಬಾರದು. ಸರ್ಕಾರ ನಿಷೇಧ ಮಾಡಿರುವುದನ್ನ ಮುಂದುವರಿಸಬೇಕು. ನಾನು ಕೂಡ ಈ ಬಗ್ಗೆ ಸರ್ಕಾರದಲ್ಲಿ ಈ ಬಗ್ಗೆ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ 21 ವರ್ಷದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8ರಂದು ಹೊನ್ನಾವರದ ಶನಿ ದೇವಾಲಯದ ಹಿಂಭಾಗದಲ್ಲಿನ ಶೆಟ್ಟಿ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿಗರು ಆರೋಪಿಸಿದ್ದರು. ಈ ವೇಳೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಪ್ರಕರಣವನ್ನ ಸಿಬಿಐಗೆ ವಹಿಸಲಾಗಿದ್ದು, ಈವರೆಗೆ ಪ್ರಕರಣದ ಪ್ರಗತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲವಾಗಿದೆ.

Edited By : Somashekar
PublicNext

PublicNext

28/09/2022 02:45 pm

Cinque Terre

22.46 K

Cinque Terre

1

ಸಂಬಂಧಿತ ಸುದ್ದಿ