ಕಾರವಾರ (ಉತ್ತರಕನ್ನಡ): ಅಂಕೋಲಾ- ಹುಬ್ಬಳ್ಳಿ ರೈಲ್ವೇ ಯೋಜನೆ ಅಹವಾಲು ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಕ್ಕಟ್ಟಿನಲ್ಲಿ ಆಯೋಜಿಸಿದ್ದಕ್ಕೆ ಮಾಜಿ ಶಾಸಕ ಸತೀಶ್ ಸೈಲ್ರಿಂದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಆದರೆ ಸಭೆಯ ಆರಂಭದಲ್ಲೇ ತಮ್ಮ ಬೆಂಬಲಿಗರೊಂದಿಗೆ ಸಭಾಂಗಣಕ್ಕೆ ಬಂದ ಸತೀಶ್ ಸೈಲ್, ಸಾರ್ವಜನಿಕ ಅಹವಾಲು ಸಭೆಯನ್ನ ತೆರೆದ ಸ್ಥಳದಲ್ಲಿ ಆಯೋಜಿಸುವಂತೆ ಆಗ್ರಹಿಸಿದರು. ಸಾರ್ವಜನಿಕರನ್ನು ಹೊರಗೆ ಕೂರಿಸಿ ಕೆಲವೇ ಜನರ ಸಮ್ಮುಖದಲ್ಲಿ ಸಭೆ ನಡೆಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, ಒಂದಾದ ಬಳಿಕ ಮತ್ತೊಂದು ತಂಡವನ್ನು ಕರೆದು ಅಹವಾಲು ಪಡೆಯುವುದಾಗಿ ತಿಳಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು. ಆದರೂ ಸೈಲ್ ಹಾಗೂ ಬೆಂಬಲಿಗರು ತಣ್ಣಗಾಗದಾಗ, ಸಭೆಗೆ ಅನಗತ್ಯವಾಗಿ ಅಡ್ಡಿಪಡಿಸದಂತೆ ಸೈಲ್ಗೆ ಶಾಸಕಿ ರೂಪಾಲಿ ನಾಯ್ಕ ಏರುಗತಿಯಲ್ಲೇ ಸೂಚಿಸಿದರು. ಈ ವೇಳೆ ಶಾಸಕಿ ರೂಪಾಲಿ ಹಾಗೂ ಮಾಜಿ ಶಾಸಕ ಸೈಲ್ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಸಭೆಯನ್ನು 15 ನಿಮಿಷ ಮುಂದೂಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
PublicNext
28/09/2022 11:35 am