ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಉಡಾಳತನಕ್ಕೆ ಬಿದ್ದ ಯುವಕರಿಂದ ಎಣ್ಣೆ- ಗಾಂಜಾ ಸೇವನೆ: ಶಾಸಕಿ ರೂಪಾಲಿ ನಾಯ್ಕ

ಕಾರವಾರ (ಉತ್ತರ ಕನ್ನಡ): ರೈಲ್ವೆಗಾಗಿ ವಿರೋಧ ಮಾಡುವವರು ಒಮ್ಮೆಯೂ ಇಲ್ಲಿನ ಯುವಕರು ಉದ್ಯೋಗ ಮಾಡುತ್ತಿದ್ದಾರೋ, ಇಲ್ಲವೋ ಎಂಬುದನ್ನ ನೋಡಿಲ್ಲ. ಇಲ್ಲಿನ ಯುವಕರು ಎಣ್ಣೆ ಕುಡಿಯುವುದು, ಗಾಂಜಾ ಸೇವಿಸುವುದು ನಡೆಯುತ್ತಿದೆ. ಇದೆಲ್ಲ ಯಾಕೆ ಆಗುತ್ತಿದೆ, ಕೆಲಸಗಳಿಲ್ಲದೆ ಉಡಾಳ (ಬೇಕಾರ್) ಬಿದ್ದಿದ್ದಕ್ಕೆ ಇವೆಲ್ಲ ಆಗುತ್ತಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ.

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆಯ ಕೇಂದ್ರ ಸಮಿತಿಯ ಪರಿಶೀಲನಾ ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ ಅವರು, ಉದ್ಯೋಗವಿಲ್ಲದೆ ಯುವ ಜನತೆ ಪರದಾಡುತ್ತಿದ್ದಾರೆ. ಈ ಯೋಜನೆಯಾದರೆ ನಮ್ಮ ಜಿಲ್ಲೆಯ ಯುವಕರಿಗೆ ಉದ್ಯೋಗ ಸಿಗುತ್ತದೆ. ಈ ರೈಲು ಮಾರ್ಗ ನಿರ್ಮಾಣ ಮಾಡುವ ಮೂಲಕ ಕೈಗಾರಿಕೆಗಳು ಬರಲಿವೆ. ಯುವಜನತೆಗೆ ಉದ್ಯೋಗಾವಕಾಶ ದೊರೆಯಲಿದೆ. ಕರಾವಳಿಯಿಂದ ರಾಜಧಾನಿಗೆ ನೇರ ಸಂಪರ್ಕ ಕಲ್ಪಿತವಾಗಲಿದೆ. ಬಡಜನರು ಬೆಂಗಳೂರಿಗೆ ಹೋಗಬೇಕೆಂದರೆ ಸೀಜನ್‌ನಲ್ಲಿ 2 ಸಾವಿರ ರೂ. ಟಿಕೆಟ್ ದರ ತೆರಬೇಕಾದ ಸ್ಥಿತಿ ಇದೆ ಎಂದರು.

ಯೋಜನೆಗೆ ವಿರೋಧ ಮಾಡುವವರು ಬೆರಳೆಣಿಕೆಯಷ್ಟು ಜನರಿದ್ದಾರೆ. ಅದೂ ಬೇರೆಲ್ಲೋ ಕುಳಿತು ಆಕ್ಷೇಪಿಸುತ್ತಿದ್ದಾರೆ. ಇವರು ಯೋಜನೆ ನಿಲ್ಲಿಸುವ ಮಾತುಗಳನ್ನಷ್ಟೇ ಆಡುತ್ತಾರೆ. ಆದರೆ ನಮ್ಮ ಯುವ ಜನತೆಯ ಕೈಗೆ ಉದ್ಯೋಗ ಕೊಡುವ ಬಗ್ಗೆ ಮೌನ ವಹಿಸುತ್ತಾರೆ. ನಮ್ಮ ವಾಣಿಜ್ಯ ವ್ಯವಹಾರಗಳ ಹೆಚ್ಚಳದ ಬಗ್ಗೆ ತುಟಿ ಬಿಚ್ಚುವುದಿಲ್ಲ. ಬಡವರು ಹೇಗೆ ಬೆಂಗಳೂರಿಗೆ ಹೋಗಬೇಕೆಂಬ ಪ್ರಶ್ನೆಗೆ ಉತ್ತರ ಇಲ್ಲ. ಜಿಲ್ಲೆಯ ಆರೋಗ್ಯ, ಶಿಕ್ಷಣ, ಅಭಿವೃದ್ಧಿ ಯಾವುದರ ಬಗ್ಗೂ ಕಾಳಜಿ ಇಲ್ಲದೆ ಇದ್ದರೆ ಹೇಗೆ? ಆಧುನಿಕ ತಂತ್ರಜ್ಞಾನ ಬಳಸಿ ನಮ್ಮ ಅರಣ್ಯ, ವನ್ಯಜೀವಿಗೆ ಉಂಟಾಗುವ ಹಾನಿಯ ಪ್ರಮಾಣವನ್ನು ಆದಷ್ಟೂ ಕಡಿಮೆ ಮಾಡಿ ಜನತೆಗೆ ಅನುಕೂಲವಾದ ರೈಲು ಮಾರ್ಗವನ್ನು ಮಾಡಬಹುದಾಗಿದೆ ಎಂದರು.

Edited By : Shivu K
PublicNext

PublicNext

28/09/2022 06:24 pm

Cinque Terre

32.14 K

Cinque Terre

1

ಸಂಬಂಧಿತ ಸುದ್ದಿ