ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ರಾಘವೇಶ್ವರ ಶ್ರೀ ಪೀಠದಿಂದ ಇಳಿಯಲು ಆದೇಶಿಸಲು ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ

ಕಾರವಾರ (ಉತ್ತರ ಕನ್ನಡ): ರಾಮಚಂದ್ರಾಪುರ ಮಠದ ಪೀಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪೀಠದಿಂದ ಇಳಿಯಲು ಆದೇಶ ನೀಡಬೇಕು. ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕು, ಕರ್ನಾಟಕದ ಎಲ್ಲಾ ಮಠಗಳ ಆಡಳಿತ ನಿಯಂತ್ರಣಕ್ಕೆ ಒಂದು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಗುರುವಾರ ವಜಾ ಮಾಡಿದೆ.

ಎದುರ್ಕುಳ ಈಶ್ವರ ಭಟ್ ಮತ್ತು ಇತರರು ಮಠದ ಭಕ್ತರೆಂದು ಹೇಳಿಕೊಂಡು ಸಲ್ಲಿಸಿದ ಅರ್ಜಿ ಸಮರ್ಥನೀಯವಲ್ಲ ಎಂದು ಅಭಿಪ್ರಾಯಪಟ್ಟ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್.ವಿಶ್ವಜೀತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ, ಅರ್ಜಿಯನ್ನು ವಜಾ ಮಾಡಿದೆ. ಹಿರಿಯ ವಕೀಲ ಮನಮೋಹನ್ ಅವರು ಮಠದ ಪರ ವಾದ ಮಂಡಿಸಿದ್ದರು.

Edited By : Vijay Kumar
PublicNext

PublicNext

30/09/2022 10:38 am

Cinque Terre

18.61 K

Cinque Terre

0

ಸಂಬಂಧಿತ ಸುದ್ದಿ