ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಕೋಸ್ಟ್ ಗಾರ್ಡ್ ಕಮಾಂಡರ್ ಭೇಟಿಯಾದ ಪರ್ಯಾವರಣ ಸಂಘಟನೆಯ ರಾಷ್ಟ್ರೀಯ ಸಂಚಾಲಕ

ಕಾರವಾರ (ಉತ್ತರಕ‌ನ್ನಡ): ಪರ್ಯಾವರಣ ಸಂಘಟನೆಯ ರಾಷ್ಟ್ರೀಯ ಸಂಚಾಲಕ ಗೋಪಾಲ್ ಆರ್ಯ ಭಾರತೀಯ ಕೋಸ್ಟ್ ಗಾರ್ಡ್ ಮುಖ್ಯ ಕಚೇರಿಗೆ ಭೇಟಿ ನೀಡಿದರು.

ಪಶ್ಚಿಮ ವಲಯದ ಕಮಾಂಡರ್ ಇನ್ಸ್‌ಪೆಕ್ಟರ್ ಜನರಲ್ ಮನೋಜ್ ಬಾಡ್ಕರ್ ಅವರನ್ನು ಭೇಟಿ ಮಾಡಿದ ಆರ್ಯ, ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದಂದು ತಮ್ಮ ರಾಷ್ಟ್ರೀಯ ಬೀಚ್ ಸ್ವಚ್ಛತೆಯ ಪ್ರಯತ್ನದಲ್ಲಿ ಕೋಸ್ಟ್ ಗಾರ್ಡ್‌ನ ಸಂಪೂರ್ಣ ಬೆಂಬಲಕ್ಕಾಗಿ ಧನ್ಯವಾದ ತಿಳಿಸಿದರು.

ಪರಿಸರ ಸಂರಕ್ಷಣೆ, ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ದೇಶದ ಜನರಲ್ಲಿ ಪರಿಸರ ಜಾಗೃತಿಯನ್ನು ತರುವ ಬಗ್ಗೆ ಚರ್ಚಿಸಿದರು. ಪಶ್ಚಿಮ ಕರಾವಳಿಯ ಕಡಲತೀರಗಳಲ್ಲಿ ಮತ್ತು ಅದರಾಚೆಗಿನ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿ ಭಾರತೀಯ ಕೋಸ್ಟ್ ಗಾರ್ಡ್ಸ್ ಬೆಂಬಲವನ್ನು ಈ ವೇಳೆ ಕೋರಿದರು.

Edited By : Nagaraj Tulugeri
PublicNext

PublicNext

27/09/2022 10:50 pm

Cinque Terre

18.95 K

Cinque Terre

0

ಸಂಬಂಧಿತ ಸುದ್ದಿ