ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯದ ನೀರಿನ ಒಳಹರಿವು ಹೆಚ್ಚಿದ್ದು, ಹೀಗೆ ಮುಂದುವರೆದಲ್ಲಿ ಜಲಾಶಯದಿಂದ ನೀರನ್ನು ಹೊರಬಿಡುವ ಬಗ್ಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ತಿಳಿಸಿದೆ.
ಜಲಾಶಯದ ಮಟ್ಟ ಇಂದು 31ಮೀ ತಲುಪಿದ್ದು, ಗರಿಷ್ಟ ಮಟ್ಟ 34.50 ಆಗಿದೆ. ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಒಳಹರಿವು ಹೆಚ್ಚಾದಲ್ಲಿ ನೀರನ್ನು ಹೊರಕ್ಕೆ ಬಿಡಲಾಗುತ್ತದೆ. ಮಂಗಳವಾರ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ನೀಡಿದ್ದು, ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದಲ್ಲಿ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇದೆ.
ಹೀಗಾಗಿ ಜಲಾಶಯದ ಸುರಕ್ಷತೆಯಿಂದ ನೀರನ್ನು ಹೊರಬಿಡಬೇಕಾಗುತ್ತದೆ. ಜಲಾಶಯದ ಕೆಳಭಾಗದ ನಿವಾಸಿಗಳು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಕೆಪಿಸಿಎಲ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Kshetra Samachara
13/09/2022 01:47 pm