ಕಾರವಾರ (ಉತ್ತರಕನ್ನಡ): ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಪೂಜೆಗಾಗಿ ಹೂವಿಗೆ ಭಾರೀ ಬೇಡಿಕೆ ಬಂದಿದೆ. ಆದರೆ ಕಾರವಾರದ ಮಾರುಕಟ್ಟೆಯಲ್ಲಿ ಹೂವಿನ ದರ ಕೇಳಿ ಗ್ರಾಹಕ ಹೌಹಾರುವಂತಾಗಿದೆ.
ನವರಾತ್ರಿಯಲ್ಲಿ ಆಯುಧ ಪೂಜೆಗೆ ವಿಶೇಷತೆಯಿದೆ. ಸಾರ್ವಜನಿಕರು ವಾಹನಗಳಿಗೆ, ಕಬ್ಬಿಣದ ವಸ್ತುಗಳಿಗೆ ಹಾಗೂ ಉದ್ಯಮಿಗಳು ವ್ಯಾಪಾರ ಮಳಿಗೆಗಳಲ್ಲಿ, ಕೈಗಾರಿಕೆ ಕೇಂದ್ರಗಳಲ್ಲಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಈ ಬಾರಿ ಹೂವಿನ ದರ ಎರಡೆ ದಿನದಲ್ಲಿ ದ್ವಿಗುಣಗೊಂಡಿದೆ. ಬೆಂಗಳೂರು, ತುಮಕೂರು ಭಾಗದಲ್ಲಿ ಮಳೆಯಾಗಿರುವ ಕಾರಣ ಮಾರುಕಟ್ಟೆಗೆ ಹೂವುಗಳು ಕಡಿಮೆ ಬಂದಿವೆ. ಹೀಗಾಗಿ ಎರ್ಡು ದಿನಗಳ ಹಿಂದಿನಕ್ಕಿಂತಲೂ ಇಂದು ದರ ಹೆಚ್ಚಾಗಿದ್ದು, ದುಬಾರಿಯಾಗಿರುವುದರಿಂದ ವ್ಯಾಪಾರವೂ ಅಷ್ಟಕ್ಕಷ್ಟೇ ಆಗಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.
ಬೈಟ್: ರಾಜಾ, ಹೂವಿನ ವ್ಯಾಪಾರಿ
ಸೇವಂತಿ, ಕಾಕಡ ಸೇರಿದಂತೆ ವಿವಿಧ ಹೂವುಗಳು ಮಾರಿಗೆ 200- 250 ರೂ.ನಂತೆ ಮಾರಾಟವಾಗುತ್ತಿದೆ. ಹೂವಿಲ್ಲದಿದ್ದರೆ ಪೂಜೆ ಮಾಡಲಾಗುವುದಿಲ್ಲ. ಹೀಗಾಗಿ ದರ ಹೆಚ್ಚಿದ್ದರೂ ಅನಿವಾರ್ಯವಾಗಿ ಖರೀದಿಸುವಂತಾಗಿದೆಯಾದರೂ, ಈ ರೀತಿಯ ಡಬಲ್ ರೇಟ್ ಹಬ್ಬದ ಖುಷಿಯನ್ನೂ ಕಸಿದಿದೆ ಎನ್ನುತ್ತಿದ್ದಾರೆ ಗ್ರಾಹಕರು.
PublicNext
03/10/2022 06:07 pm