ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರು ಗುದ್ದಿ ರಸ್ತೆಯ ಮೇಲೆ ಬಿದ್ದ ಮಹಿಳೆ; ನೆರವಾಗಿ ಮಾನವೀಯತೆ ಮೆರೆದ ಶಾಸಕ

ಕಾರವಾರ: ಕಾರು‌ ಡಿಕ್ಕಿಯಾಗಿ ರಸ್ತೆ ಪಕ್ಕ ಬಿದ್ದಿದ್ದ ಮಹಿಳೆಯೊಬ್ಬರನ್ನು ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ದಿನಕರ ಶೆಟ್ಟಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.ಅಧಿವೇಶನದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಶಾಸಕ ದಿನಕರ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟೀಲರನ್ನು ಭೇಟಿಯಾಗಿ ನಂತರ ವಿಧಾನಸೌಧದ ಕಡೆಗೆ ತೆರಳುತ್ತಿದ್ದರು. ಮಾರ್ಗಮಧ್ಯದಲ್ಲಿ ಮಹಿಳೆಯೋರ್ವಳ ಸ್ಕೂಟರ್ ಗೆ ಕಾರೊಂದು ಗುದ್ದಿದ ಪರಿಣಾಮ ಆಕೆ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದಳು.

ಇದನ್ನು ಗಮನಿಸಿದ ದಿನಕರ ಶೆಟ್ಟಿ, ತಮ್ಮ ಕಾರನ್ನು ನಿಲ್ಲಿಸಿ, ಅಪಘಾತಕ್ಕೀಡಾದ ಮಹಿಳೆಯ ಬಳಿಗೆ ತೆರಳಿ, ಕೂಡಲೇ ಪೊಲೀಸರಿಗೆ ಕರೆಮಾಡಿ ಸ್ಥಳಕ್ಕೆ ಕರೆಯಿಸಿ ಮಹಿಳೆಯನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

13/09/2022 03:49 pm

Cinque Terre

4.72 K

Cinque Terre

0