ಕಾರವಾರ: ಗೋವಾ ದಾಬೋಲಿಮ್ ಏರ್‌ಪೋರ್ಟ್ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‌ನ ಮಧ್ಯಭಾಗದಲ್ಲಿ ಕುಳಿತು ಅತಂತ್ರ ಸ್ಥಿತಿಯಲ್ಲಿದ್ದ ಮಹಿಳೆಯೋರ್ವರನ್ನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕಾರವಾರ ಮೂಲದ ಸ್ನೇಹಾ ನಾಯ್ಕ ರಕ್ಷಣೆಗೊಳಗಾದ ಮಹಿಳೆ. ಈಕೆ ಫ್ಲೈಓವರ್‌ನ ಪಿಲ್ಲರ್‌ಗಳ ಮಧ್ಯದ ಜಾಗದಲ್ಲಿ ಅವಿತು ಕುಳಿತಂತೆ ಕಂಡ ಟ್ಯಾಕ್ಸಿ ಚಾಲಕರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಸಿಬ್ಬಂದಿ ಮಹಿಳೆಯನ್ನ ಸುರಕ್ಷಿತವಾಗಿ ಕೆಳಕ್ಕೆ ಕರೆತಂದಿದ್ದಾರೆ.
'ಕೆಲಸ ಕೊಡಿಸುತ್ತೇವೆಂದು ನನ್ನನ್ನ ಯಾರೋ ಒಬ್ಬರು ಇಲ್ಲಿಗೆ ಕರೆತಂದರು. ಆದರೆ ನನ್ನ ಬಳಿ ಇದ್ದ ಎಲ್ಲವನ್ನೂ ಲೂಟಿ ಮಾಡಿ ಇಲ್ಲಿ ಬಿಟ್ಟು ಹೋದರು. ನನ್ನ ಬಳಿ ಈಗ ಹಣವಿಲ್ಲ. ಇಲ್ಲೇ ಸಮೀಪದಲ್ಲಿ ನಾನು ಕೆಲಸ ಮಾಡುತ್ತಿದ್ದೆ' ಎಂದು ಮಹಿಳೆ ತಿಳಿಸಿದ್ದಾಳೆ ಎನ್ನಲಾಗಿದೆ.
ಸದ್ಯ ಮಹಿಳೆ ಫ್ಲೈಓವರ್ ನ ಮೇಲಿರದೆ, ಫ್ಲೈಓವರ್ ನ ಪಿಲ್ಲರ್ ಗಳ ಮಧ್ಯೆ ಹೋಗಿದ್ದಾದರೂ ಹೇಗೆ ಎಂಬ ಕುತೂಹಲ ಸ್ಥಳೀಯರಲ್ಲಿ ಮೂಡಿದೆ.
PublicNext
13/09/2022 02:45 pm