ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಳಕೂರಿನ ಪಂಡಿತ ಮನೆತನದ ಸುಮುಖ ಪಂಡಿತ 4000 ಅಕ್ಕಿ ಕಾಳುಗಳನ್ನು ಜೋಡಿಸಿ ಶಿವಪಂಚಾಕ್ಷರಿಯ 5 ಶ್ಲೋಕಗಳನ್ನು ಬರೆದು ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರ್ಪಡೆಗೊಂಡಿದ್ದಾರೆ.
26 ವರ್ಷದ ಸುಮುಖ ಓದಿದ್ದು ಇಂಜಿನೀಯರಿಂಗ್, ಕರ್ನಾಟಕ, ಕೇರಳ ಜ್ಯೋತಿಷ್ಯದ ಆಕರ ಗ್ರಂಥಗಳನ್ನು ಕೊಟ್ಟ ವಿದ್ಯಾಮಾಧವ ಪಂಡಿತರ ವಂಶಜನಾದ ಈತ, ಜ್ಯೋತಿಷ್ಯ ಅಭ್ಯಾಸ ಮಾಡುತ್ತಿದ್ದು, ತಂದೆಯೊಂದಿಗೆ ವೈದಿಕ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಗುರುಪೂರ್ಣಿಮೆ ಎಂದು ಅಕ್ಕಿಕಾಳನ್ನು ಜೋಡಿಸಲು ಆರಂಭಿಸಿ ಒಂದು ವಾರದಲ್ಲಿ ಮುಗಿಸಿರುವ ಸುಮುಖ, ರಾಘವೇಶ್ವರ ಶ್ರೀಗಳಿಂದ ಸನ್ಮಾನ ಪಡೆದಿದ್ದಾರೆ.
30*24 ಇಂಚು ಅಳತೆಯ ಫಲಕದಲ್ಲಿ ಇವರ ಶಿವಪಂಚಾಕ್ಷರಿ ವೀಕ್ಷಿಸಿದ ದಾಖಲೆ ಮಾಡುವ ಸಂಸ್ಥೆಗಳು ಯುವಕನ ಹೊಸ ಪ್ರಯೋಗಕ್ಕೆ ಮೆಚ್ಚುಗೆ ಸೂಚಿಸಿ ದಾಖಲಿಸಿ ಪದಕ ಮತ್ತು ಪ್ರಶಸ್ತಿಯನ್ನು ಕಳಿಸಿಕೊಟ್ಟಿವೆ.
PublicNext
12/09/2022 10:28 pm